ಸಂಸ್ಥಾಪಕರಾದ ನಾರಾಯಣಮೂರ್ತಿ, ಕ್ರಿಸ್‌ ಗೋಪಾಲಕೃಷ್ಣನ್‌, ನಂದನ್‌ ನಿಲೇಕಣಿ, ಕೆ. ದಿನೇಶ್‌ ಹಾಗೂ ಎಸ್‌.ಡಿ. ಶಿಬುಲಾಲ್‌ ಅವರು ತಮ್ಮ ಮತ್ತು ತಮ್ಮ ಕುಟುಂಬದ ಹೆಸರಿನಲ್ಲಿ 28 ಸಾವಿರ ಕೋಟಿ ರು. ಮೌಲ್ಯದ ಶೇ.12.75ರಷ್ಟುಷೇರು ಹೊಂದಿದ್ದಾರೆ. ಅದನ್ನೆಲ್ಲಾ ಮಾರಲು ನಿರ್ಧರಿಸಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಸಂಸ್ಥಾಪಕರಾದ ನಾರಾಯಣಮೂರ್ತಿ, ಕ್ರಿಸ್ ಗೋಪಾಲಕೃಷ್ಣನ್, ನಂದನ್ ನಿಲೇಕಣಿ, ಕೆ. ದಿನೇಶ್ ಹಾಗೂ ಎಸ್.ಡಿ. ಶಿಬುಲಾಲ್ ಅವರು ತಮ್ಮ ಮತ್ತು ತಮ್ಮ ಕುಟುಂಬದ ಹೆಸರಿನಲ್ಲಿ 28 ಸಾವಿರ ಕೋಟಿ ರು. ಮೌಲ್ಯದ ಶೇ.12.75ರಷ್ಟುಷೇರು ಹೊಂದಿದ್ದಾರೆ. ಅದನ್ನೆಲ್ಲಾ ಮಾರಲು ನಿರ್ಧರಿಸಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಈ ಸುದ್ದಿ ಕಾರ್ಪೊರೆಟ್ ಲೋಕದಲ್ಲಿ ಅಲ್ಲೋಲ- ಕಲ್ಲೋಲಕ್ಕೆ ಕಾರಣವಾಗಿದೆ. ಇದು ಸತ್ಯವಲ್ಲ ಎಂದು ಸ್ವತಃ ನಾರಾಯಣಮೂರ್ತಿ ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಲು ಗೋಪಾಲಕೃಷ್ಣನ್ ಹಾಗೂ ನಿಲೇಕಣಿ ನಿರಾಕರಿಸಿದ್ದಾರೆ. ಅಂತಹ ಯಾವುದೇ ಬೆಳವಣಿಗೆ ನಡೆದಿಲ್ಲ ಎಂದು ಇಸ್ಫೋಸಿಸ್ ಕೂಡ ಸ್ಪಷ್ಟನೆ ನೀಡಿದೆ.
ಸಂಸ್ಥಾಪಕರು ಕಂಪನಿಯಿಂದ ನಿರ್ಗಮಿಸುವ ಸುದ್ದಿಯ ಬೆನ್ನಲ್ಲೇ ಷೇರುಪೇಟೆಯಲ್ಲಿ ಇಸ್ಫೋಸಿಸ್ ಷೇರುಗಳು ಒಂದು ಹಂತದಲ್ಲಿ ಶೇ.3ರಷ್ಟುಕುಸಿತ ಕಂಡವು. ಬಳಿಕ ಚೇತರಿಸಿಕೊಂಡು ಶೇ.0.78ರಷ್ಟುಇಳಿಕೆ ದಾಖಲಿಸಿದವು.
