ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಈ ಹೇಳಿಕೆ ಕೆಲವೊಮ್ಮೆ ಯಾವ ರೀತಿಯಲ್ಲಿ ಅಪಹಾಸ್ಯಕ್ಕೆ ಒಳಗಾಗುತ್ತೆ ಎನ್ನುವುದಕ್ಕೆ ಇಲ್ಲಿದೆ ಒಂದು ಸಾಕ್ಷಿ. ಕೊರಗರ ಮನೆಯಲ್ಲಿ ಸಹಭೋಜನದ ಹೆಸರಿನಲ್ಲಿ ಆಯೋಜನೆಯಾಗಿದ್ದ ಕಾರ್ಯಕ್ರಮದಲ್ಲಿ ಹೈಡ್ರಾಮವೇ ನಡೆದು ಹೋಗಿದೆ. ಅದೇನು ಅಂತೀರಾ? ಹಾಗಾದ್ರೆ ಈ ಸ್ಟೋರಿ ನೋಡಿ
ಉಡುಪಿ(ಮಾ.14): ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಈ ಹೇಳಿಕೆ ಕೆಲವೊಮ್ಮೆ ಯಾವ ರೀತಿಯಲ್ಲಿ ಅಪಹಾಸ್ಯಕ್ಕೆ ಒಳಗಾಗುತ್ತೆ ಎನ್ನುವುದಕ್ಕೆ ಇಲ್ಲಿದೆ ಒಂದು ಸಾಕ್ಷಿ. ಕೊರಗರ ಮನೆಯಲ್ಲಿ ಸಹಭೋಜನದ ಹೆಸರಿನಲ್ಲಿ ಆಯೋಜನೆಯಾಗಿದ್ದ ಕಾರ್ಯಕ್ರಮದಲ್ಲಿ ಹೈಡ್ರಾಮವೇ ನಡೆದು ಹೋಗಿದೆ. ಅದೇನು ಅಂತೀರಾ? ಹಾಗಾದ್ರೆ ಈ ಸ್ಟೋರಿ ನೋಡಿ
ಸಿಎಂ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಾಗ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ಆಡಿಗಳಿಗೆ ಹೋಗಿ ಗ್ರಾಮ ವಾಸ್ತವ್ಯ ಹೂಡಿ ಜನಪ್ರಿಯತೆ ಗಳಿಸಿದ್ದರು. ಅದೇ ರೀತಿ ಈ ಬಾರಿಯ ಹೊಸ ವರ್ಷ ದಿನ ಕೊರಗ ಜನಾಂಗದವರ ಮನೆಯಲ್ಲಿ ಆಹಾರ ಸೇವಿಸಿ ಸಹಭೋಜನ ಕೂಡ ಮಾಡಿದ್ರು. ಈ ಕಾರ್ಯಕ್ರಮ ಭಾರೀ ಜನಪ್ರೀಯತೆ ಗಳಿಸಿತ್ತು. ಇದೇ ಕಾರ್ಯಕ್ರಮ ನಕಲು ಮಾಡಲು ಹೋದ ಉಡುಪಿಯ ಅಲೆವೂರು ಗ್ರಾಮ ಪಂಚಾಯತ್ ಎಡವಿದೆ. ಜಿಲ್ಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಹೊರಗಿನಿಂದ ತರಿಸಿಕೊಂಡ ಊಟ ತಿಂದು ತೇಗಿಕಾಟಾಚಾರದ ಸಹಭೋಜನ ನಡೆಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಈಬಗ್ಗೆ ನನಗೆ ಗೊತ್ತೆ ಇಲ್ಲ ಎಂದಿದ್ದಾರೆ.
ಅಡುಗೆ ಭಟ್ಟರ ಮನೆಯಲ್ಲಿ ಊಟ ತಯಾರಿಸಿ ಕೊರಗರ ಮನೆಯಲ್ಲಿ ಬಡಿಸಲಾಗಿದೆಯಂತೆ. ಯಾವ ಕೊರಗರೂ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳ ಜೊತೆ ಊಟಕ್ಕೆ ಕೂರಲಿಲ್ಲ. ಬಂದವರು ಅವರ ಪಾಡಿಗೆ ಉಂಡು ಹೋಗಿದ್ದಾರೆ. ಅಷ್ಟೆ ಅಲ್ಲದೆ ಕಾರ್ಯಕ್ರಮಕ್ಕೆ ಪಂಚಾಯತ್ ನಡೆ ಕೊರಗ ಸಮುದಾಯದ ಎಡೆಗೆ ಎಂಬ ಹೆಸರು ನೀಡಲಾಗಿತ್ತು. ಆದ್ರೆ ಇದು ಕೇವಲ ಕಾಟಾಚಾರದ ಶೀರ್ಷಿಕೆಯಾಗಿ ಉಳಿದಿದೆ.
ಇಂದಿಗೂ ಕರಾವಳಿಯ ಕೊರಗರು ಅತ್ಯಂತ ಹಿಂದುಳಿದಿದ್ದಾರೆ. ತಮಗಾಗಿ ಬರುವ ಅನುದಾನವನ್ನು ಬಳಸಿಕೊಳ್ಳುವ ಅರಿವೂ ಇಲ್ಲದ ಮುಗ್ದ ಜನರು. ಜನರ ಮುಗ್ಧತೆಯನ್ನ ಜನಪ್ರತಿನಿಧಿಗಳು, ಅಧಿಕಾರಿಗಳು, ಈ ರೀತಿ ಬಳಸಿಕೊಳ್ತಾರೆ ಅಂದ್ರೆ ನಿಜಕ್ಕೂ ನಾಚಿಕೇಗೇಡು.
