ಕುವೆಂಪುರವರು 'ಮನುಜಮತ ವಿಶ್ವಪಥ' ಸಂದೇಶ ಸಾರಿದ್ದರು. ನನ್ನ ತಂದೆ ಲಂಕೇಶ್ "ಇಟ್ಟಿಗೆ ಪವಿತ್ರವಲ್ಲ ಜೀವ ಪವಿತ್ರ"ಎಂಬ ಸಾರ್ವಕಾಲಿಕ ಶ್ರೇಷ್ಠ ಎಂದು ಹೇಳಿದ್ದರು.
ಮಂಗಳೂರು(ಜ.09): ಕೋಮುದ್ವೇಷದಿಂದ ಹತ್ಯೆಯಾದ ದೀಪಕ್ ರಾವ್ ಹಾಗೂ ಅಹಮದ್ ಬಶೀರ್ ಅವರ ಮನೆಗಳಿಗೆ ಪತ್ರಕರ್ತ ಹಾಗೂ ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಭೇಟಿ ನೀಡಿ ಸಾಂತ್ವನ ಹೇಳಿ ಎರಡೂ ಕುಟುಂಬಗಳಿಗೂ ತಲಾ 25 ಸಾವಿರ ರೂ. ಚೆಕ್ ವಿತರಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುವೆಂಪುರವರು 'ಮನುಜಮತ ವಿಶ್ವಪಥ' ಸಂದೇಶ ಸಾರಿದ್ದರು. ನನ್ನ ತಂದೆ ಲಂಕೇಶ್ "ಇಟ್ಟಿಗೆ ಪವಿತ್ರವಲ್ಲ ಜೀವ ಪವಿತ್ರ"ಎಂಬ ಸಾರ್ವಕಾಲಿಕ ಶ್ರೇಷ್ಠ ಎಂದು ಹೇಳಿದ್ದರು. ಇವೆಲ್ಲವೂ ಜಾತಿ ಧರ್ಮಗಳಿಗಿಂತ ಮನುಕುಲ ಮುಖ್ಯ ಎಂಬುದನ್ನು ಒತ್ತಿ ಹೇಳಿದ್ದವು. ಆದರೆ ಈ ಸರ್ಕಾರ ಜಾತಿಗೆ ಜಾತಿ ಮತ್ತು ಧರ್ಮಕ್ಕೆ ಧರ್ಮವನ್ನು ಎತ್ತಿಕಟ್ಟಿ ಅಮಾಯಕರ ಹತ್ಯೆ ಮಾಡುತ್ತಿದೆ. ಗೌರಿ ಸತ್ತು ನಾಲ್ಕು ತಿಂಗಳಾಯಿತು.ಸರ್ಕಾರ ಏನು ಮಾಡುತ್ತಿದೆ? ಇನ್ನೆಷ್ಟು ಗೌರಿ, ದೀಪಕ್, ಬಷೀರ್...ರ ಕೊಲೆಗಳಿಗಾಗಿ ಕಾಯುತ್ತಿದ್ದೀರಾ ಸಿದ್ದರಾಮಯ್ಯನವರೆ?ಇನ್ನೆಷ್ಟು ಕೋಮು ಗಲಭೆ ನಡೆಸಬೇಕಿಂದಿದ್ದೀರಿ? ಎಂದು ಆಕ್ರೋಶ ವ್ಯಕ್ತಪಡಿಸಿದರು.
