ಸುಮುರ್‌: ದ್ವೀಪರಾಷ್ಟ್ರ ಇಂಡೋನೇಷ್ಯಾದ ಮೇಲೆ ಶನಿವಾರ ರಾತ್ರಿ ಅಪ್ಪಳಿಸಿದ ಸುನಾಮಿ ಅಲೆಗೆ ಬಲಿಯಾದವರ ಸಂಖ್ಯೆ 430ನ್ನು ತಲುಪಿದೆ.

ಅಲ್ಲದೆ ಇನ್ನೂ 130 ಜನ ನಾಪತ್ತೆಯಾಗಿದ್ದಾರೆ. ಹೀಗಾಗಿ ಸಾವಿನ ಸಂಖ್ಯೆ ಇನ್ನಷ್ಟುಏರುವ ಭೀತಿಯಿದೆ. ಘಟನೆಯಲ್ಲಿ 1500ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಈ ಪೈಕಿ ಕೆಲವರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮತ್ತೆ ಕೆಲವರನ್ನು ಪ್ರಾಥಮಿಕ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ. ಸುನಾಮಿಯಿಂದಾಗಿ ಸಾವಿರಾರು ಜನ ಮನೆ ಕಳೆದುಕೊಂಡಿದ್ದು, ಅವರಿಗೆ ವಾಸ್ತವ್ಯ ಒದಗಿಸಲು ಸರ್ಕಾರ ಹರ ಸಾಹಸ ಪಡುತ್ತಿದೆ.