ಭಾರತ-ಇಂಡೋನೇಷ್ಯಾ ರಾಜತಾಂತ್ರಿಕ ಸಂಬಂಧ ಸ್ಥಾಪನೆಯ 70ನೇ ವರ್ಷಾಚರಣೆ ಸ್ಮರಣಾರ್ಥ| ರಾಮಾಯಣದ ಅಂಚೆ ಚೀಟಿ ಬಿಡುಗಡೆ ಮಾಡಿದ ಇಂಡೋನೇಷ್ಯಾ| ಇಂಡೋನೇಷ್ಯಾದ ಪ್ರಸಿದ್ಧ ಶಿಲ್ಪಕಾರ ಬಾಪಕ್ ನ್ಯೋಮನ್ ನುರಾತಾ ವಿನ್ಯಾಸ| ಸೀತಾಮಾತೆಯನ್ನು ರಕ್ಷಿಸಲು ಜಟಾಯು ಹೋರಾಡುತ್ತಿರುವ ಸನ್ನಿವೇಶದ ಮುದ್ರಣ|

ಜಕಾರ್ತಾ(ಏ.24): ಭಾರತೀಯತೆ, ಭಾರತದ ಸಂಸ್ಕೃತಿ ಉಪಖಂಡವನ್ನೂ ದಾಟಿ ಏಷ್ಯಾ ಮತ್ತು ವಿಶ್ವದ ಇತರ ಖಂಡಗಳಲ್ಲಿ ಪಸರಿಸಿ ಶತಮಾನಗಳೇ ಉರುಳಿವೆ. ಭಾರತದ ಮಹಾನ್ ಧರ್ಮಗ್ರಂಥಗಳಾದ ಮಹಾಭಾರತ, ರಾಮಾಯಣದ ಕಥೆಗಳು, ಬೌದ್ಧ ಧರ್ಮವೂ ಸೇರಿದಂತೆ ನಮ್ಮ ಉದಾತ್ತ ಚಿಂತನೆಗಳು ಇಂದಿಗೂ ಜಗತ್ತಿಗೆ ಸಾಂಸ್ಕೃತಿಕ ಬುನಾದಿ ಹಾಕಿ ಕೊಡುತ್ತಿವೆ. 

ಅದರಲ್ಲೂ ಇಂಡೋನೇಷ್ಯಾ ದಲ್ಲಿ ರಾಮಾಯಣದ ಕಥೆಗಳು ಭಾರೀ ಜನಪ್ರಿಯತೆಯನ್ನು ಪಡೆದಿವೆ. ರಾಮಾಯಣ ಅಲ್ಲಿನ ಸಾಂಸ್ಕೃತಿಕ ಲೋಕದ ಭಾಗವಾಗಿ ಶತಮಾನಗಳೇ ಉರುಳಿವೆ. 

ಅದರಂತೆ ಶತಮಾನಗಳ ಸಾಂಸ್ಕೃತಿಕ ಅನುಬಂಧದ ಪ್ರತೀಕವಾಗಿ ಇಂಡೋನೇಷ್ಯಾ ಸರ್ಕಾರ ರಾಮಾಯಣದ ಅಂಚೆ ಚೀಟಿ ಬಿಡುಗಡೆ ಮಾಡಿದೆ.

Scroll to load tweet…

ಭಾರತ-ಇಂಡೋನೇಷ್ಯಾ ರಾಜತಾಂತ್ರಿಕ ಸಂಬಂಧ ಸ್ಥಾಪನೆಯ 70ನೇ ವರ್ಷಾಚರಣೆ ಸ್ಮರಣಾರ್ಥವಾಗಿ ರಾಮಾಯಣ ಕಥಾವಸ್ತುವಿನ ಅಂಚೆ ಚೀಟಿಗಳನ್ನು ಇಂಡೋನೇಷ್ಯಾ ಸರ್ಕಾರ ಬಿಡುಗಡೆ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ 2018ರಲ್ಲಿ ಇಂಡೋನೇಷ್ಯಾಗೆ ಭೇಟಿ ನೀಡಿದ್ದ ವೇಳೆ ಉಭಯ ರಾಷ್ಟ್ರಗಳು ಈ ಕುರಿತು ಒಪ್ಪಂದ ಮಾಡಿಕೊಂಡಿದ್ದವು. ಅದರಂತೆ ಇಂಡೋನೇಷ್ಯಾ ಸರ್ಕಾರ ರಾಮಾಯಣದ ಅಂಚೆ ಚೀಟಿ ಬಿಡುಗಡೆ ಮಾಡಿ ಭಾರತದೊಂದಿಗಿನ ತನ್ನ ಶತಮಾನಗಳ ಸಂಬಂಧವನ್ನು ಸ್ಮರಿಸಿದೆ.

ಇಂಡೋನೇಷ್ಯಾದ ಪ್ರಸಿದ್ಧ ಶಿಲ್ಪಕಾರ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಬಾಪಕ್ ನ್ಯೋಮನ್ ನುರಾತಾ ಈ ಅಂಚೆ ಚೀಟಿಯನ್ನು ವಿನ್ಯಾಸ ಮಾಡಿದ್ದು, ಸೀತಾಮಾತೆಯನ್ನು ರಕ್ಷಿಸಲು ಜಟಾಯು ಹೋರಾಡುತ್ತಿರುವ ಸನ್ನಿವೇಶವನ್ನು ಮುದ್ರಿಸಲಾಗಿದೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಏ.18ರಂದು ಮುಗಿದಿದ್ದು, ಏ.23 ರಂದು ಎರಡನೇ ಹಂತದ ಮತದಾನ ಮುಕ್ತಾಯ ಕಂಡಿದೆ. ನಡೆಯಲಿದೆ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.