ಬೆಂಗಳೂರಿಗರನ್ನು ಹಸಿವು ಮುಕ್ತ ಮಾಡುವ ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇಂದಿರಾ ಕ್ಯಾಂಟೀನ್ ನಿರ್ಮಾಣದ ಕಾರ್ಯ ಭರದಿಂದ ಸಾಗಿದೆ.  ಇದೇ ಆಗಸ್ಟ್ ನೊಳಗೆ ಕ್ಯಾಂಟೀನ್ ತೆರೆಯುವ  ಚಿಂತನೆ ನಡೆಸಿದೆ.

ಬೆಂಗಳೂರು(ಜು.27): ಬೆಂಗಳೂರಿಗರನ್ನು ಹಸಿವು ಮುಕ್ತ ಮಾಡುವ ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇಂದಿರಾ ಕ್ಯಾಂಟೀನ್ ನಿರ್ಮಾಣದ ಕಾರ್ಯ ಭರದಿಂದ ಸಾಗಿದೆ. ಇದೇ ಆಗಸ್ಟ್ ನೊಳಗೆ ಕ್ಯಾಂಟೀನ್ ತೆರೆಯುವ ಚಿಂತನೆ ನಡೆಸಿದೆ.

ದುಬೈ ಮೂಲದ ಫಾಸಿಲ್ ಸಬ್ನಾ ಫೌಂಡೇಷನ್ ನಿಂದ ಸರಳ ಕ್ಯಾಂಟೀನ್ ನಿರ್ಮಾಣ ಮಾಡಿಸುವ ಕಾರ್ಯಕ್ಕೆ ಬಿಬಿಎಂಪಿ ಮುಂದಾಗಿದೆ. ತಮಿಳುನಾಡಿನ ಕೃಷ್ಣಗಿರಿಯಲ್ಲಿ ಕ್ಯಾಂಟೀನ್ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಫ್ಯಾಬ್ರಿಕೇಟೆಡ್ ಫ್ರೀ ಕಾಸ್ಟಿಂಗ್ ಮಾದರಿಯಲ್ಲಿ ನಿರ್ಮಾಣವಾಗ್ತಿರುವ ಕ್ಯಾಂಟೀನ್ ಗಳ ನಿರ್ಮಾಣಕ್ಕೆ 2 ರಿಂದ 3 ದಿನ ಬೇಕಾಗುತ್ತೆ. ಒಟ್ಟು 28 ಲಕ್ಷದ 50 ಸಾವಿರ ಮೊತ್ತದಲ್ಲಿ ಸಿದ್ದವಾಗೋ ಕ್ಯಾಂಟೀನ್ ನಲ್ಲಿ ನಾಲ್ಕು ಪ್ರವೇಶ ದ್ವಾರಗಳನ್ನು ಕಾಣಬಹುದಾಗಿದೆ. ಈ ಕ್ಯಾಂಟೀನ್ ನಲ್ಲಿ ಒಂದು ಬಾರಿ 80 ಮಂದಿ ಉಪಹಾರ ಸೇವನೆ ಮಾಡಬಹುದು.

ವಿಕಾಲಾಂಗರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಕೂಡ ಮಾಡಲಾಗ್ತಿದೆ. ಜುಲೈ 30ರೊಳಗೆ ಕ್ಯಾಂಟೀನ್ ನಿರ್ಮಾಣದ ಕಾಮಗಾರಿ ಪೂರ್ಣ ಆಗಲಿದೆ. ಅಗಸ್ಟ್ 9ರೊಳಗೆ ಎಲ್ಲಾ ವಾರ್ಡ್ ನಲ್ಲೂ ಕ್ಯಾಂಟೀನ್ ಎಲ್ಲಾ ಕೆಲಸ ಪೂರ್ಣ ಆಗುವ ವಿಶ್ವಾಸ ಪಾಲಿಕೆ ವ್ಯಕ್ತಪಡಿಸಿದೆ