ಇಂದಿರಾ ಕ್ಯಾಂಟೀನ್ ಆಗಲಿದೆ ಹೈಟೆಕ್ ಕ್ಯಾಂಟೀನ್; ಮೆನುವಿನಲ್ಲಿ ಆಗಲಿದೆ ಬದಲಾವಣೆ

First Published 26, Feb 2018, 10:41 AM IST
Indira Canteen Menu will be change
Highlights

ರಾಜಧಾನಿ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಸರ್ಕಾರ ಹೊಸ ತಂತ್ರ ರೂಪಿಸಿದೆ.  

ಬೆಂಗಳೂರು (ಫೆ.26): ರಾಜಧಾನಿ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಸರ್ಕಾರ ಹೊಸ ತಂತ್ರ ರೂಪಿಸಿದೆ. 

ಮಾರ್ಚ್ 1 ರಿಂದ ಇಂದಿರಾ ಕ್ಯಾಂಟಿನ್ ಮೆನು ಬದಲಾವಣೆಯಾಗಲಿದೆ.  ಹೈಟೆಕ್ ಊಟ, ಉಪಹಾರ ನೀಡಲು ಸರ್ಕಾರ ಮುಂದಾಗಿದೆ.  ಅನ್ನ ಸಾಂಬಾರ್ ಮೊಸರನ್ನಗೆ ಸೀಮಿತವಾಗಿದ್ದ ಕ್ಯಾಂಟೀನ್’ನಲ್ಲಿ ಪಾಯಸ, ವೈರೈಟಿ ಇಡ್ಲಿ, ಸೇರಿದಂತೆ ಉತ್ತರ ಭಾರತದ ತಿನಿಸು ನೀಡಲಿದ್ದಾರೆ.  

ದರ್ಶಿನಿಯಂತಹ ಹೋಟೆಲ್’ನಲ್ಲಿ ಸಿಗುವ  ತಿಂಡಿಗಳು ಇಂದಿರಾ ಕ್ಯಾಂಟಿನ್​’ನಲ್ಲಿ ಲಭ್ಯವಾಗಲಿದೆ. ಕಡಿಮೆ ದರದಲ್ಲಿ ಹೆಚ್ಚು ವೆರೈಟಿ ತಿಂಡಿ ನೀಡಿ ಗ್ರಾಹಕರ ಸೆಳೆಯಲು ಸರ್ಕಾರ ಚುನಾವಣಾ ತಂತ್ರ ಮಾಡಿದೆ. 
ವೆರೖಟಿ ತಿಂಡಿ ಜಾಸ್ತಿ ನೀಡುವುದರಿಂದ ಖರ್ಚು ಹೆಚ್ಚಳವಾಗಲಿದ್ದು ಆ ವೆಚ್ಚವನ್ನು ತೆರಿಗೆದಾರರ ಮೇಲೆ ಹಾಕಲು ಪಾಲಿಕೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಸಾಲದ ಸುಳಿಯಲ್ಲಿರುವ ಪಾಲಿಕೆಯಿಂದ ಕ್ಯಾಂಟಿನ್’​ಗಾಗಿ ಮತ್ತಷ್ಟು ಸಾಲ‌ ಮಾಡುವ ಸಾಧ್ಯತೆ.
 

loader