ನವದೆಹಲಿ[ಜು.28]: ಇಂಗ್ಲಿಷ್‌ ನಿಯತಕಾಲಿಕೆಯಾದ ‘ಇಂಡಿಯಾ ಟುಡೇ’ ದೇಶದ ಪ್ರಭಾವಿ ರಾಜಕಾರಣಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಟಾಪ್‌-10ರಲ್ಲಿ ಕಾಂಗ್ರೆಸ್ಸಿನ ಒಬ್ಬ ನಾಯಕರಿಗೂ ಸ್ಥಾನ ದೊರೆತಿಲ್ಲ. ನಿರೀಕ್ಷೆಯಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಥಮ ಸ್ಥಾನದಲ್ಲಿದ್ದರೆ, ಕೇಂದ್ರ ಸರ್ಕಾರದಲ್ಲಿ ನಂ.2 ಸ್ಥಾನದಲ್ಲಿರುವ ಗೃಹ ಸಚಿವ ಅಮಿತ್‌ ಶಾ ಅವರಿಗೆ 2ನೇ ರ‍್ಯಾಂಕ್‌ ಸಿಕ್ಕಿದೆ. ಉಳಿದಂತೆ 9 ಮಂದಿ ಬಿಜೆಪಿಗರು ಇದ್ದರೆ, ಆರ್‌ಎಸ್‌ಎಸ್‌ನ ಮೋಹನ ಭಾಗವತ್‌ 3 ಸ್ಥಾನದಲ್ಲಿದ್ದಾರೆ.

‘ಹೈ ಅಂಡ್‌ ಮೈಟಿ’ ಎಂಬ ಹೆಸರಿನ ರ‍್ಯಾಂಕಿಂಗ್‌ ಇದಾಗಿದ್ದು, ನಿಯತಕಾಲಿಕೆಯ ಆಗಸ್ಟ್‌ ಸಂಚಿಕೆಯಲ್ಲಿ ಪ್ರಕಟವಾಗಿದೆ. ದೇಶದ ಪ್ರಭಾವಿಗಳ ಪಟ್ಟಿಯಲ್ಲಿ 27 ಮಂದಿ ಉದ್ಯಮಿಗಳಿದ್ದು, ರಿಲಯನ್ಸ್‌ ಉದ್ಯಮ ಸಾಮ್ರಾಜ್ಯದ ಒಡೆಯ ಮುಕೇಶ್‌ ಅಂಬಾನಿ ಪ್ರಥಮ ಸ್ಥಾನದಲ್ಲಿದ್ದಾರೆ.

ಟಾಪ್‌ 10 ಪ್ರಭಾವಿ ರಾಜಕಾರಣಿಗಳು

1. ನರೇಂದ್ರ ಮೋದಿ

2. ಅಮಿತ್‌ ಶಾ

3. ಮೋಹನ ಭಾಗವತ್‌

4. ರಾಜನಾಥ ಸಿಂಗ್‌

5. ನಿತಿನ್‌ ಗಡ್ಕರಿ

6. ನಿರ್ಮಲಾ ಸೀತಾರಾಮನ್‌

7. ಪೀಯೂಷ್‌ ಗೋಯಲ್‌

8. ಯೋಗಿ ಆದಿತ್ಯನಾಥ್‌

9. ದೇವೇಂದ್ರ ಫಡ್ನವೀಸ್‌

10. ಪ್ರಕಾಶ್‌ ಜಾವಡೇಕರ್‌

ಪ್ರಭಾವಿ ವ್ಯಕ್ತಿಗಳು

1. ಮುಕೇಶ್‌ ಅಂಬಾನಿ

2. ಕುಮಾರ ಮಂಗಳಂ ಬಿರ್ಲಾ

3. ಗೌತಮ್‌ ಅದಾನಿ

4. ಉದಯ್‌ ಕೋಟಕ್‌

5. ಆನಂದ ಮಹೀಂದ್ರ

6. ರತನ್‌ ಟಾಟಾ

7. ವಿರಾಟ್‌ ಕೊಹ್ಲಿ

8. ಎನ್‌. ಚಂದ್ರಶೇಖರನ್‌

9. ಅಮಿತಾಭ್‌ ಬಚ್ಚನ್‌

10. ಶಿವ ನಾಡಾರ್‌