ಬೆಲೆಯೇರಿಕೆ ತಲೆಬಿಸಿಯಲ್ಲಿರುವ ನರೇಂದ್ರ ಮೋದಿ ಸರ್ಕಾರಕ್ಕೆ ಸ್ವಲ್ಪ ಆಶಾಭಾವನೆಯ ಅಂಕಿಸಂಖ್ಯೆಗಳು ಸೋಮವಾರ ಲಭ್ಯವಾಗಿವೆ. ಜನವರಿ ತಿಂಗಳ ಹಣದುಬ್ಬರ ಪ್ರಮಾಣ ಶೇ.5.07ಕ್ಕೆ ಇಳಿಕೆಯಾಗಿದೆ. ಇದೇ ವೇಳೆ ಕೈಗಾರಿಕಾ ಉತ್ಪಾದನೆಯು ಶೇ.7.1ರ ದರದಲ್ಲಿ ಬೆಳವಣಿಗೆ ಕಂಡಿದೆ.
ನವದೆಹಲಿ: ಬೆಲೆಯೇರಿಕೆ ತಲೆಬಿಸಿಯಲ್ಲಿರುವ ನರೇಂದ್ರ ಮೋದಿ ಸರ್ಕಾರಕ್ಕೆ ಸ್ವಲ್ಪ ಆಶಾಭಾವನೆಯ ಅಂಕಿಸಂಖ್ಯೆಗಳು ಸೋಮವಾರ ಲಭ್ಯವಾಗಿವೆ. ಜನವರಿ ತಿಂಗಳ ಹಣದುಬ್ಬರ ಪ್ರಮಾಣ ಶೇ.5.07ಕ್ಕೆ ಇಳಿಕೆಯಾಗಿದೆ. ಇದೇ ವೇಳೆ ಕೈಗಾರಿಕಾ ಉತ್ಪಾದನೆಯು ಶೇ.7.1ರ ದರದಲ್ಲಿ ಬೆಳವಣಿಗೆ ಕಂಡಿದೆ.
ಚಿಲ್ಲರೆ ಹಣದುಬ್ಬರವು ಡಿಸೆಂಬರ್‌ನಲ್ಲಿ 17 ತಿಂಗಳ ಗರಿಷ್ಠವಾದ ಶೇ.5.21ಕ್ಕೆ ಏರಿತ್ತು. ಈಗ ಇದರ ಪ್ರಮಾಣ ಶೇ.5.07ಕ್ಕೆ ತಗ್ಗಿದೆ. ತರಕಾರಿ, ಹಣ್ಣು ಹಾಗೂ ಇಂಧನ ಉತ್ಪನ್ನಗಳ ದರ ತಗ್ಗಿದ್ದು ಇದಕ್ಕೆ ಕಾರಣ ಎನ್ನಲಾಗಿದೆ. ಆದರೆ ಕಳೆದ ವರ್ಷ ಜನವರಿಯಲ್ಲಿ ಇದರ ಪ್ರಮಾಣ ಶೇ.3.17ರಷ್ಟಿತ್ತು.
ಇದೇ ವೇಳೆ ಬಂಡವಾಳ ಸರಕು ಹಾಗೂ ಉತ್ಪಾದನಾ ವಲಯದ ಉತ್ತಮ ಪ್ರಗತಿಯ ಕಾರಣ ಕೈಗಾರಿಕಾ ಉತ್ಪಾದನಾ ಸೂಚ್ಯಂಕ 2017ರ ಡಿಸೆಂಬರ್‌ನಲ್ಲಿ ಶೇ.7.1ರ ದರದಲ್ಲಿ ಬೆಳವಣಿಗೆ ಕಂಡಿದೆ. ಇದು 2016ರ ಡಿಸೆಂಬರ್‌ನಲ್ಲಿ ಕೇವಲ ಶೇ.2.4ರ ದರದಲ್ಲಿ ಪ್ರಗತಿ ಕಂಡಿತ್ತು.

Last Updated 11, Apr 2018, 12:58 PM IST