ಜಗತ್ತಿನ 7 ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್‌'ಗೆ ನಿತ್ಯ ಗರಿಷ್ಠ 40,000 ಜನರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲು ಭಾರತೀಯ ಪುರಾತತ್ವ ಇಲಾಖೆ ಮುಂದಾಗಿದೆ.

ನವದೆಹಲಿ (ಜ.04): ಜಗತ್ತಿನ 7 ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್‌'ಗೆ ನಿತ್ಯ ಗರಿಷ್ಠ 40,000 ಜನರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲು ಭಾರತೀಯ ಪುರಾತತ್ವ ಇಲಾಖೆ ಮುಂದಾಗಿದೆ.

ಪ್ರವಾಸಿಗರು ಗರಿಷ್ಠ 3 ಗಂಟೆ ಮಾತ್ರ ಸ್ಮಾರಕ ವೀಕ್ಷಿಸಲು ಅವಕಾಶ ನೀಡುವ ಸಾಧ್ಯತೆ ಇದೆ. ಆದರೆ ತಲಾ 1,000 ರೂ ಶುಲ್ಕ ನೀಡುವ ವಿದೇಶಿ ಪ್ರವಾಸಿಗರಿಗೆ ಸಮಯದ ಮಿತಿ ಪ್ರಸ್ತಾಪ ಇಲ್ಲ. 40 ರೂ.ಶುಲ್ಕ ನೀಡುವ ಭಾರತೀಯರ ಮೇಲೆ ಮಾತ್ರ ಸಮಯದ ಮಿತಿ ಹೇರುವ ಪ್ರಸ್ತಾಪ ಇದೆ.