ಬೆಂಗಳೂರು[ಡಿ.12]  ಪೋರ್ನ್ ಸೈಟ್ ಗಳ ಬ್ಯಾನ್ ಸಂಬಂಧ ಪರ ವಿರೋಧವಾಗಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆದೆ ಇವೆ. ಭಾರತದಲ್ಲಿ ಇವನ್ನು ಇಟ್ಟುಕೊಳ್ಳಬೇಕೆ? ಬೇಡವೇ? ಎಂಬುದು ಸದ್ಯದ ಬಹುಚರ್ಚಿತ ವಿಚಾರಗಳಲ್ಲಿ ಒಂದು. ಆದರೆ ಪೋರ್ನ್ ಹಬ್ ಸಂಸ್ಥೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳೂ ನಿಜಕ್ಕೂ ಭಾರತೀಯರೆಲ್ಲರೂ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡಿದೆ.

ಪೋರ್ನ್ ಹಬ್ ತನ್ನ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದೆ. 2018ರಲ್ಲಿ 33.5 ಬಿಲಿಯನ್ ಜನ ಪೋರ್ನ್ ಹಬ್‌ಗೆ ಭೇಟಿ ಕೊಟ್ಟಿದ್ದಾರಂತೆ. 2017ಕ್ಕೆ ಹೋಲಿಕೆ ಮಾಡಿದರೆ ಇದು 5 ಬಿಲಿಯನ್ ಹೆಚ್ಚಾಗಿದೆ. ಪೋರ್ನ್ ವೀಕ್ಷಣೆ ಮಾಡುವಲ್ಲಿ ಶೇ. 26 ಇದ್ದ ಮಹಿಳೆಯರ ಸಂಖ್ಯೆ ಇದೀಗ ಶೇ. 30ಕ್ಕೆ ಏರಿದೆ.

ಪ್ರಮುಖ ಪೋರ್ನ್‌ಸೈಟ್‌ ಬ್ಯಾನ್‌, ಕಳ್ಳಕಿಂಡಿ ಇಣುಕಿದ್ರೆ...!

ವಾರ್ಷಿಕ ವರದಿಯ ಹೈಲೈಟ್ಸ್‌ಗಳು

*ಪ್ರತಿದಿನ ಸರಾಸರಿ 92 ಮಿಲಿಯನ್ ಹಿಟ್ಸ್ 

* ಪೋಲಾಂಡ್, ಕೆನಡಾ ಮತ್ತು ಆಸ್ಟ್ರೇಲಿಯಾದ್ದು ಸಿಂಹಪಾಲು

* ಕಿಮ್ ಕರ್ದಾಶಿಯನ್ 15 ವರ್ಷದವಳಿದ್ದಾಗ ಹೊರತಂದ ಸೆಕ್ಸ್ ಟೇಪ್ ಇಂದಿಗೂ ಅಗ್ರ ಶ್ರೇಯಾಂಕದಲ್ಲಿದೆ.

* ಪ್ರತಿ ನಿಮಿಷಕ್ಕೆ ಕಿಮ್ ವಿಡಿಯೋಕ್ಕೆ 55 ವೀವ್ಸ್ ಲಭ್ಯವಾಗುತ್ತಿದೆ.

* ಪ್ರತಿ ಎರಡು ಗಂಟೆಗೆ ಹೊಸ ವಿಡಿಯೋವೊಂದು ಅಪ್ ಲೋಡ್ ಆಗುತ್ತಿದೆ.

ಪೋರ್ನ್.. ಅಲ್ಲಿ ಓಪನ್ ಆಗದಿದ್ದರೇನು.. ಇಲ್ಲಿ ಆಗ್ತಿದೆ!

* ಮಾಜಿ ನೀಲಿ ಚಿತ್ರ ತಾರೆ ಸ್ಟಾರ್ಮಿ ಡೇನಿಯಸ್ಸ್ ಹೆಸರಿನಲ್ಲಿ ಅತಿ ಹೆಚ್ಚು ಸರ್ಚ್ ಆಗಿದೆ.

* ಪೋರ್ನ್ ಹಬ್ ವೀಕ್ಷಣೆಯಲ್ಲಿ ಅಮೆರಿಕಕ್ಕೆ ಮೊದಲ ಸ್ಥಾನ, ಭಾರತಕ್ಕೆ ಮೂರನೇ ಸ್ಥಾನ

* ಫಿಲಿಫೈನ್ಸ್ ಜನರು ಅತಿ ಹೆಚ್ಚು ಕಾಲ[13 ನಿಮಿಷ 50 ಸೆಕೆಂಡ್]  ವ್ಯಯ ಮಾಡಿದರೆ ಭಾರತೀಯರು [8 ನಿಮಿಷ] ಅತಿ ಕಡಿಮೆ ಕಾಲ ಕಳೆಯುತ್ತಾರಂತೆ.

* ಭಾರತೀಯರಿಗೆ ಇಂದಿಗೂ ಸನ್ನಿ ಲಿಯೋನ್ ಹಾಟ್ ಫೆವರೇಟ್. ಎರಡನೇ ಸ್ಥಾನದಲ್ಲಿ ಮಿಯಾ ಖಲೀಫಾ ಇದ್ದಾರೆ.

ಯುಎಸ್ ಮತ್ತು ಯುಕೆ ಬಿಟ್ಟರೆ ಪ್ರಪಂಚದಲ್ಲಿ ಅತಿ ಹೆಚ್ಚು ಪೋರ್ನ್ ವೀಕ್ಷಣೆ ಮಾಡುವುದು ಭಾರತದಲ್ಲಿ. ಹಾಗಾಗಿಯೇ ಸರಕಾರ ಪ್ರಮುಖ ವೆಬ್ ತಾಣಗಳ ಮೇಲೆ ಬ್ಯಾನ್ ಪ್ರಯೋಗಕ್ಕೆ ಮುಂದಾದರೆ ಬೇರೊಂದು ಹೆಸರಿನಲ್ಲಿ ತೆರೆದುಕೊಳ್ಳುತ್ತಲೇ ಇರುತ್ತವೆ.