ವರದಕ್ಷಿಣೆ ಕೊಡದ್ದಕ್ಕೆ ಪತ್ನಿಯ ಕಿಡ್ನಿಯನ್ನೇ ಕದ್ದು ಮಾರಿದ ಪತಿ

First Published 9, Feb 2018, 10:52 AM IST
Indian wife has kidney stolen by husband over unpaid dowry
Highlights

2000 ರು. ವರದಕ್ಷಿಣೆ ನೀಡಲು ವಿಫಲವಾದುದಕ್ಕೆ, ಪತಿಯೇ ತನ್ನ ಪತ್ನಿಯ ಕಿಡ್ನಿಯನ್ನು ರಹಸ್ಯವಾಗಿ ಮಾರಾಟ ಮಾಡಿದ ಹೇಯ ಘಟನೆಯೊಂದು ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ತಾನು ಕಿಡ್ನಿ ಕಳೆದುಕೊಂಡ ವಿಷಯ, ಮಹಿಳೆಗೆ ತಡವಾಗಿ ಗೊತ್ತಾಗಿದ್ದು, ಇದೀಗ ಆಕೆ ನೀಡಿದ ದೂರಿನ ಮೇರೆಗೆ ಆಕೆಯ ಪತಿ ಮತ್ತು ಆತನ ಸೋದರನನ್ನು ಬಂಧಿಸಲಾಗಿದೆ.

ನವದೆಹಲಿ: 2000 ರು. ವರದಕ್ಷಿಣೆ ನೀಡಲು ವಿಫಲವಾದುದಕ್ಕೆ, ಪತಿಯೇ ತನ್ನ ಪತ್ನಿಯ ಕಿಡ್ನಿಯನ್ನು ರಹಸ್ಯವಾಗಿ ಮಾರಾಟ ಮಾಡಿದ ಹೇಯ ಘಟನೆಯೊಂದು ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ತಾನು ಕಿಡ್ನಿ ಕಳೆದುಕೊಂಡ ವಿಷಯ, ಮಹಿಳೆಗೆ ತಡವಾಗಿ ಗೊತ್ತಾಗಿದ್ದು, ಇದೀಗ ಆಕೆ ನೀಡಿದ ದೂರಿನ ಮೇರೆಗೆ ಆಕೆಯ ಪತಿ ಮತ್ತು ಆತನ ಸೋದರನನ್ನು ಬಂಧಿಸಲಾಗಿದೆ.

ಮುರ್ಶಿದಾಬಾದ್‌ನ ಮಹಿಳೆಯೊಬ್ಬರಿಗೆ 2 ವರ್ಷದ ಹಿಂದೆ ಕರುಳಿನ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಈ ವೇಳೆ ಆಕೆಯ ಪತಿ, ಕಿಡ್ನಿ ಮಾರಾಟದ ಜಾಲದೊಂದಿಗೆ ಕೈಜೋಡಿಸಿ, ಪತ್ನಿಗೆ ತಿಳಿಯದಂತೆಯೇ ಕಿಡ್ನಿಯನ್ನು ತೆಗೆಸಿ ಮಾರಾಟ ಮಾಡಿದ್ದಾನೆ. ಇತ್ತೀಚೆಗೆ ಮಹಿಳೆಗೆ ಪದೇ ಪದೇ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಆಕೆ ವೈದ್ಯರ ಬಳಿ ತಪಾಸಣೆಗೆ ಹೋಗಿದ್ದರು. ಈ ವೇಳೆ ವೈದ್ಯರು ತಪಾಸಣೆ ಮಾಡಿದಾಗ, ಒಂದು ಕಿಡ್ನಿ ಇಲ್ಲದಿರುವ ವಿಷಯ ತಿಳಿಸಿದ್ದಾಳೆ. ಈ ಬಗ್ಗೆ ಮಹಿಳೆ ಮನೆಗೆ ಬಂದು ವಿಚಾರಿಸಿದಾಗ, ಪತಿ ಅಸಲಿ ವಿಷಯ ಬಾಯಿ ಬಿಟ್ಟಿದ್ದಾನೆ.

ಇದೀಗ ಮಹಿಳೆ ನೀಡಿದ ದೂರಿನ ಅನ್ವಯ ಆರೋಪಿ ಪತಿ ಬಿಸ್ವಜೀತ್‌ ಸರ್ಕಾರ್‌ ಮತ್ತು ಆತನ ಸಹೋದರನನ್ನು ಬಂಧಿಸಲಾಗಿದೆ. ಆದರೆ ಕಿಡ್ನಿ ಉದ್ಯಮಿಯೊಬ್ಬರಿಗೆ ಮಾರಾಟ ಮಾಡಲಾಗಿದೆ, ಆದರೆ ಪತ್ನಿ ಇದಕ್ಕೆ ಸಮ್ಮತಿಸಿದ್ದಳು ಎಂದು ಬಿಸ್ವಜೀತ್‌ ಹೇಳಿದ್ದಾನೆ.

loader