ಪ್ರವಾಸಕ್ಕೆಂದು ತೆರಳಿ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ ಭಾರತೀಯ ಕುಟುಂಬ| ಇಂಡೋನೇಷ್ಯಾ ಹೋಟೆಲಲ್ಲಿ ಕಳವು ಮಾಡಿ ಸಿಕ್ಕಿ ಬಿದ್ದ ಭಾರತೀಯ ಕುಟುಂಬ|
ಜಕಾರ್ತಾ[ಜು.29]: ಹೋಟೆಲ್‌ಗೆ ಹೋದವರು ಊಟ ಅಥವಾ ತಿಂಡಿ ಮಾಡಿ ಹಣ ನೀಡದೆ ಕದ್ದುಮುಚ್ಚಿ ಪಾರಾಗಲು ಯತ್ನಿಸುವುದನ್ನು ಕೇಳಿಯೇ ಇರುತ್ತೇವೆ. ಆದರೆ, ಭಾರತ ಮೂಲದ ಕುಟುಂಬವೊಂದು ಹೋಟೆಲ್‌ವೊಂದರಲ್ಲಿ ವಸ್ತುಗಳನ್ನು ಕಳವು ಮಾಡಿ ಸಿಕ್ಕಿಬಿದ್ದ ಅವಮಾನಕಾರಿ ಘಟನೆ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದಿದೆ.
ಪ್ರವಾಸಕ್ಕೆಂದು ತೆರಳಿ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ ಭಾರತೀಯ ಕುಟುಂಬವೊಂದು, ಹೋಟೆಲ್‌ನಿಂದ ತೆರಳಲು ಅಣಿಯಾಗಿದ್ದ ವೇಳೆ ಹೋಟೆಲ್‌ನ ಸಿಬ್ಬಂದಿ, ವಾಹನವನ್ನು ತಪಾಸಣೆ ಮಾಡಿದ್ದಾರೆ. ಈ ವೇಳೆ ಹೋಟೆಲ್‌ನ ಶೃಂಗಾರ ಸಾಮಗ್ರಿ, ಶೌಚಾಲಯ ಉಪಕರಣ, ಎಲೆಕ್ಟ್ರಾನಿಕ್ಸ್ ವಸ್ತು, ಟವಲ್‌ಗಳು ಸೇರಿದಂತೆ ಇನ್ನಿತರ ಹಲವು ವಸ್ತುಗಳು ಸಿಕ್ಕಿವೆ.
ಈ ಸಂದರ್ಭದಲ್ಲಿ ತಮ್ಮ ವಿಮಾನ ಹೊರಡುವ ಸಮಯವಾಗುತ್ತಿದೆ. ತಮ್ಮಲ್ಲಿರುವ ಹೋಟೆಲ್‌ನ ಎಲ್ಲ ವಸ್ತುಗಳಿಗೂ ಹಣ ಕೊಡುತ್ತೇವೆ. ದಯಮಾಡಿ ತಮ್ಮನ್ನು ಬಿಟ್ಟುಬಿಡಿ ಎಂದು ಮಹಿಳೆ ವಿನಂತಿಸಿಕೊಳ್ಳುವ ಧ್ವನಿಯೂ ಈ ವಿಡಿಯೋದಲ್ಲಿ ದಾಖಲಾಗಿದೆ. ಕುಟುಂಬದ ವರ್ತನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.
