ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಉಗ್ರರ ನೆಲೆಗಳ ಮೇಲಿನ ಸೇನೆಯ ಸರ್ಜಿಕಲ್ ದಾಳಿ ವೇಳೆ ಯೋಧ ಚವಾನ್ ಪಾಕ್ ಪ್ರವೇಶಿಸಿದ್ದರು. ಬಳಿಕ ಅವರನ್ನು ಪಾಕಿಸ್ತಾನ ಭಾರತಕ್ಕೆ ಹಸ್ತಾಂತರಿಸಿತ್ತು.

ನವದೆಹಲಿ(ಅ.26): ಕಳೆದ ವರ್ಷ ಭಾರತ ಸೇನೆಯ ಸರ್ಜಿಕಲ್ ದಾಳಿ ವೇಳೆ ಪಾಕಿಸ್ತಾನ ಪ್ರವೇಶಿಸಿ, ಪುನಃ ಭಾರತದ ಸರ್ಕಾರಕ್ಕೆ ಹಸ್ತಾಂತರವಾದ ಭಾರತೀಯ ಸೇನೆಯ ಯೋಧ ಚಂದು ಬಾಬು ಲಾಲ್ ಚವಾನ್ ತಪ್ಪಿತಸ್ಥ ಎಂದು ಪಾಕ್ ಹೇಳಿದೆ.

ಈ ಹಿನ್ನೆಲೆಯಲ್ಲಿ ಅವರಿಗೆ 3 ತಿಂಗಳು ಜೈಲು ಶಿಕ್ಷೆ ವಿಧಿಸಲು ಶಿಫಾರಸು ಮಾಡಲಾಗಿದೆ. ಯೋಧಗೆ ವಿಧಿಸಲಾಗಿರುವ ಶಿಕ್ಷೆ ವಿರುದ್ಧ ಚವಾನ್ ಅವರು ಮನವಿ ಸಲ್ಲಿಸಬಹುದಾಗಿದೆ.

ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಉಗ್ರರ ನೆಲೆಗಳ ಮೇಲಿನ ಸೇನೆಯ ಸರ್ಜಿಕಲ್ ದಾಳಿ ವೇಳೆ ಯೋಧ ಚವಾನ್ ಪಾಕ್ ಪ್ರವೇಶಿಸಿದ್ದರು. ಬಳಿಕ ಅವರನ್ನು ಪಾಕಿಸ್ತಾನ ಭಾರತಕ್ಕೆ ಹಸ್ತಾಂತರಿಸಿತ್ತು.

ಚವಾಣ್ 37ನೇ ರಾಷ್ಟ್ರೀಯ ರೈಫಲ್ ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.