ಭವಿಷ್ಯದಲ್ಲಿ ಕೈಗೊಳ್ಳುವ ಗಗನಯಾತ್ರೆ ವೇಳೆ ಅಂತರಿಕ್ಷಕ್ಕೆ ಕಳುಹಿಸಲು 12 ಮಂದಿಯನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಆಯ್ಕೆ ಮಾಡಿದ್ದು, ಭಾರತೀಯ ಮೂಲದ ಅಮೆರಿಕನ್‌ ಪ್ರಜೆ ರಾಜಾಚಾರಿ ಕೂಡ ಸ್ಥಾನ ಪಡೆದಿದ್ದಾರೆ.

ವಾಷಿಂಗ್ಟನ್‌: ಭವಿಷ್ಯದಲ್ಲಿ ಕೈಗೊಳ್ಳುವ ಗಗನಯಾತ್ರೆ ವೇಳೆ ಅಂತರಿಕ್ಷಕ್ಕೆ ಕಳುಹಿಸಲು 12 ಮಂದಿಯನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಆಯ್ಕೆ ಮಾಡಿದ್ದು, ಭಾರತೀಯ ಮೂಲದ ಅಮೆರಿಕನ್‌ ಪ್ರಜೆ ರಾಜಾಚಾರಿ ಕೂಡ ಸ್ಥಾನ ಪಡೆದಿದ್ದಾರೆ.

ತನ್ಮೂಲಕ ನಾಸಾ ವತಿಯಿಂದ ಗಗನಯಾತ್ರೆ ಕೈಗೊಳ್ಳಲಿರುವ ಮೂರನೇ ಭಾರತೀಯ ಮೂಲದ ವ್ಯಕ್ತಿ ಎನಿಸಿಕೊಳ್ಳಲಿದ್ದಾರೆ. ಈ ಹಿಂದೆ ಕಲ್ಪನಾ ಚಾವ್ಲಾ ಹಾಗೂ ಸುನೀತಾ ವಿಲಿಯಮ್ಸ್‌ ಗಗನಯಾತ್ರೆ ಕೈಗೊಂಡಿದ್ದರು.

ನಾಸಾದ ಗಗನಯಾತ್ರಿಯಾಗಲು ದಾಖಲೆಯ 18,300 ಮಂದಿ ಅರ್ಜಿ ಸಲ್ಲಿಸಿದ್ದರು. ಆ ಪೈಕಿ 12 ಮಂದಿಯನ್ನು ನಾಸಾ ಆಯ್ಕೆ ಮಾಡಿದೆ. ಚಾರಿ ಅಮೆರಿಕದ ವಾಯುಪಡೆಯಲ್ಲಿ ಲೆಫ್ಟಿನಂಟ್‌ ಕರ್ನಲ್‌ ಆಗಿದ್ದಾರೆ.