ವಾಷಿಂಗ್ಟನ್(ಜ.15): ಶ್ವೇತಭವನದ ಪತ್ರಿಕಾ ಕಚೇರಿಯ  ಉನ್ನತ ವಕ್ತಾರರಾಗಿದ್ದ ಭಾರತೀಯ ಮೂಲದ ರಾಜ್ ಶಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಹೊರ ನಡೆದಿದ್ದಾರೆ. 

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ ಅಧಿಕಾರಿಗಳ ನಿರ್ಗಮನವನ್ನು ಸಾರುತ್ತಿದ್ದ ಶಾ ಇದೀಗ ತಾವೇ ಅವರ ಆಡಳಿತದಿಂದ ಹೊರ ನಡೆದಿದ್ದಾರೆ.

ಅಮೆರಿಕದ ಲಾಬಿಂಗ್ ಸಂಸ್ಥೆಗೆ ಸೇರುವ ಸಲುವಾಗಿ ಶಾ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಇತ್ತೀಚಿಗೆ ಹಲವಾರು ಹಿರಿಯ ಅಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಟ್ರಂಪ್ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.