ಮೆಲ್ಬೋರ್ನ್: ಭಾರತೀಯ ಮೂಲದ ಮಹಿಳಾ ಡೆಂಟಿಸ್ಟ್ ಕಾಣೆಯಾದ ಎರಡು ದಿನಗಳ ನಂತರ ಸೂಟ್‌ಕೇಸ್‌‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕಾರು ಪಾರ್ಕಿಂಗ್‌ ಸ್ಥಳದಲ್ಲಿ 32 ವರ್ಷದ ಪ್ರೀತಿ ರೆಡ್ಡಿ ಶವ ಪತ್ತೆಯಾಗಿದೆ, ಎಂದು ನ್ಯೂ ಸೌತ್ ವೇಲ್ಸ್ ಪೊಲೀಸರು ತಿಳಿಸಿದ್ದಾರೆ.

ಪ್ರೀತಿಯ ಮಾಜಿ ಪ್ರಿಯಕರನೂ ಅಪಘಾತದಲ್ಲಿ ಮೃತಪಟ್ಟಿದ್ದು, ಇಬ್ಬರ ಹತ್ಯೆ ಪೂರ್ವನಿಯೋಜಿತವೆಂದು ಪೊಲೀಸರು ಶಂಕಿಸಿದ್ದಾರೆ. ಡ್ನಿಯ ಜಾರ್ಜ್ ರಸ್ತೆಯ ಮ್ಯಾಕ್‌ಡೊನಾಲ್ಡ್ ಸಮೀಪ ಕ್ಯೂನಲ್ಲಿ ನಿಂತ ಪ್ರೀತಿ ಭಾನುವಾರ ಕಡೆಯದಾಗಿ ಕಾಣಿಸಿಕೊಂಡಿದ್ದರು.  ನಂತರ ವಿಚಿತ್ರವಾಗಿ ಕಣ್ಮರೆಯಾಗಿ ಕುಟುಂಬದ ಸದಸ್ಯರು ಹಾಗೂ ಸಹೋದ್ಯೋಗಿಗಳ ಆತಂಕಕ್ಕೆ ಕಾರಣವಾಗಿತ್ತು. ಇದೀಗ ಕಾರಿನೊಳಗಿದ್ದ ಸೂಟ್‌ಕೇಸ್‌ವೊಂದರಲ್ಲಿ ಅವರ ಮೃತದೇಹ ಮಂಗಳವಾರ ಪತ್ತೆಯಾಗಿದೆ. 

ಹಲವು ಬಾರಿ ತಿವಿದು ಪ್ರೀತಿಯನ್ನು ಕೊಲೆ ಮಾಡಲಾಗಿದೆ. ಪ್ರೀತಿ ಮತ್ತು ಆಕೆಯ ಮಾಜಿ ಪ್ರಿಯಕರ ಹೊಟೇಲ್‌ವೊಂದರಲ್ಲಿ ಒಟ್ಟಿಗಿದ್ದರೆಂದು ಮಾದ್ಯಮಗಳು ವರದಿ ಮಾಡಿವೆ.

ದಂತ ಸಮ್ಮೇಳನಕ್ಕೆ ಹೊರಟಿದ್ದ ಪ್ರೀತಿ ತನ್ನ ಕುಟುಂಬದೊಂದಿಗೆ ಭಾನುವಾರ 11 ಗಂಟೆಗೆ ಫೋನ್ ಮೂಲಕ ಮಾತನಾಡಿದ್ದರು. ತಿಂಡಿ ತಿಂದ ನಂತರ ಮನೆಗೆ ಮರಳುವುದಾಗಿ ತಿಳಿದ್ದರು ಪ್ರೀತಿ. ಎಷ್ಟೊತ್ತಾದರೂ ಮನೆಗೆ ಮರಳದ ಹಾಗೂ ಫೋನ್ ಸಂಪರ್ಕಕ್ಕೂ ಸಿಗದಿದ್ದಕ್ಕೆ ಕುಟುಂಬದ ಸದಸ್ಯರು ಪೊಲೀಸರನ್ನು ಸಂಪರ್ಕಿಸಿದ್ದರು.

ರೆಸ್ಟೋರೆಂಟ್‌ವೊಂದರಿಂದ ಪ್ರೀತಿ ಒಬ್ಬಂಟಿಯಾಗಿ ಹೊರ ಬಂದಿರುವುದು ಸಿಸಿಟಿವಿಯಲ್ಲಿಯೂ ಸೆರೆಯಾಗಿದೆ, ಎಂದು ಮೂಲಗಳು ತಿಳಿಸಿವೆ.