ಉದ್ದೇಶಪೂರ್ವಕ  ಸುಸ್ಥಿದಾರರಾಗಿರುವ  ಉದ್ಯಮಿ ವಿಜಯ್ ಮಲ್ಯರವರಿಗೆ ಮತ್ತೆ ವಿಚಾರಣೆಯ ಬಿಸಿ ಶುರುವಾಗಲಿದೆ. ಜಾಮೀನು ಸಿಕ್ಕಿದೆ ಎಂದು ನಿರಾಳವಾಗಿರುವ ಮಲ್ಯರವರಿಗೆ ಮತ್ತೆ ತಲೆನೋವು ಶುರುವಾಗಲಿದೆ. ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಇಂದು ಲಂಡನ್ ಗೆ ತೆರಳಿದ್ದು, ಮಲ್ಯರವರ ಹಸ್ತಾಂತರದ ಬಗ್ಗೆ ಚರ್ಚೆ ನಡೆಸಲಿದೆ. 

ನವದೆಹಲಿ (ಮೇ.02): ಉದ್ದೇಶಪೂರ್ವಕ ಸುಸ್ಥಿದಾರರಾಗಿರುವ ಉದ್ಯಮಿ ವಿಜಯ್ ಮಲ್ಯರವರಿಗೆ ಮತ್ತೆ ವಿಚಾರಣೆಯ ಬಿಸಿ ಶುರುವಾಗಲಿದೆ. ಜಾಮೀನು ಸಿಕ್ಕಿದೆ ಎಂದು ನಿರಾಳವಾಗಿರುವ ಮಲ್ಯರವರಿಗೆ ಮತ್ತೆ ತಲೆನೋವು ಶುರುವಾಗಲಿದೆ. ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಇಂದು ಲಂಡನ್ ಗೆ ತೆರಳಿದ್ದು, ಮಲ್ಯರವರ ಹಸ್ತಾಂತರದ ಬಗ್ಗೆ ಚರ್ಚೆ ನಡೆಸಲಿದೆ. 

ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಇಂದು ಲಂಡನ್ ಗೆ ತೆರಳಿದ್ದು ಅಕ್ರಮ ಹಣದ ವಹಿವಾಟು ಪ್ರಕರಣ ಎದುರಿಸುತ್ತಿರುವ ಮಲ್ಯರವರ ವಿಚಾರಣೆಯನ್ನು ತ್ವರಿತಗೊಳಿಸಲು ನೆರವು ನೀಡಲಿದೆ. ಜೊತೆಗೆ ಅವರನ್ನು ಗಡಿಪಾರು ಮಾಡುವ ಬಗ್ಗೆ ಅಲ್ಲಿನ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಿದೆ.

ಮಲ್ಯರವರ ಹಸ್ತಾಂತರ ವಿಚಾರ ಬ್ರಿಟಿಷ್ ನ್ಯಾಯಾಲಯದ ಮುಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಿಟಿಷ್ ಪಬ್ಲಿಕ್ ಪ್ರಾಸಿಕ್ಯೂಟರ್ ಗೆ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಪ್ರಾಥಮಿಕ ನೆರವು ನೀಡಿದೆ. ನ್ಯಾಯಾಲಯದಲ್ಲಿ ಪ್ರಕರಣವನ್ನು ಇನ್ನಷ್ಟು ಬಲಪಡಿಸುವುದಕ್ಕಾಗಿ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯವನ್ನು ಲಂಡನ್’ಗೆ ಕಳುಹಿಸಲಾಗಿದೆ.