ದೇಶೀಯವಾಗಿ ಚೊಚ್ಚಲವಾಗಿ ತಯಾರಿಸಿದ ‘ಆ್ಯಂಟಿ ಶಿಪ್ ಕ್ಷಿಪಣಿ’ಯನ್ನು ಭಾರತೀಯ ನೌಕಾಯಾನ ಯಶಸ್ವಿಯಾಗಿ ಪ್ರಯೋಗಿಸಿತು. ಕಾಲ್ವರಿ ಸಬ್ ಮರಿನ್ ನಿಂದ ಅರಬ್ಬೀ ಸಮುದ್ರದಿಂದ ಉಡಾಯಿಸಲಾಗಿದೆ.a
ನವದೆಹಲಿ (ಮಾ.02): ದೇಶೀಯವಾಗಿ ಚೊಚ್ಚಲವಾಗಿ ತಯಾರಿಸಿದ ‘ಆ್ಯಂಟಿ ಶಿಪ್ ಕ್ಷಿಪಣಿ’ಯನ್ನು ಭಾರತೀಯ ನೌಕಾಯಾನ ಯಶಸ್ವಿಯಾಗಿ ಪ್ರಯೋಗಿಸಿತು. ಕಾಲ್ವರಿ ಸಬ್ ಮರಿನ್ ನಿಂದ ಅರಬ್ಬೀ ಸಮುದ್ರದಿಂದ ಉಡಾಯಿಸಲಾಗಿದೆ.
ಕ್ಷಿಪಣಿ ಯಶಸ್ವಿಯಾಗಿ ಕಕ್ಷೆಯನ್ನು ತಲುಪಿದೆ ಎಂದು ಮೂಲಗಳು ತಿಳಿಸಿವೆ. ಭಾರತೀಯ ನೌಕೆಯ ಯುದ್ಧ ಸಾಮರ್ಥ್ಯವನ್ನು ಇದು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ಯಶಸ್ವಿಯಾಗಿ ಕ್ಷಿಪಣಿ ಪರೀಕ್ಷೆ ನಡೆಸಿದ ರಕ್ಷಣಾ ಸಚಿವಾಲಯದ ವಿಜ್ಞಾನಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಈ ಮೂಲಕ ಭಾರತ 5 ರಾಷ್ಟ್ರಗಳ ಗುಂಪಿಗೆ ಸೇರಿದಂತಾಗುತ್ತದೆ. ಇಡೀ ದೇಶಕ್ಕೆ ಇದು ಹೆಮ್ಮೆಯ ಸಂಗತಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
