ನವದೆಹಲಿ(ಮೇ.03): ಭಾರತೀಯ ನೌಕಾಪಡೆಯ ಮುಂಚೂಣಿ ಕ್ಷಿಪಣಿ ವಿಧ್ವಂಸಕ, ಐಎನ್ಎಸ್ ರಂಜಿತ್ ಇಂದು ಅಧಿಕೃತವಾಗಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ.

36 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿರುವ ಐಎನ್ಎಸ್ ರಂಜಿತ್, ಭಾರತೀಯ ನೌಕಾ ಇತಿಹಾಸದಲ್ಲಿ ಅತ್ಯುತ್ತಮವಾದ ಸಮರ ನೌಕೆ ಎಂಬನ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅಂಡಮಾನ್ ಮತ್ತು ನಿಕೋಬಾರ್ ನ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ಮಾಜಿ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದೇವೇಂದ್ರ ಕುಮಾರ್ ಜೋಶಿ ವಿಶಾಖಪಟ್ಟಣಂನ ನೌಕಾ ಡಾಕ್ ಯಾರ್ಡ್ ನಲ್ಲಿ ಇದನ್ನು ಕಡೆಯ ಬಾರಿಗೆ ಚಲಾಯಿಸಲಿದ್ದಾರೆ.

1970ರಲ್ಲಿ ಉಕ್ರೇನ್ ನ ನಿಕೋಲೇವ್ ಮ್ಯೂನಾರ್ಡ್ಸ್ ಶಿಪ್ ಯಾರ್ಡ್ ನಲ್ಲಿ ಇದನ್ನು ನಿರ್ಮಿಸಲಾಗಿತ್ತು.  ಲವ್ಕಿ ಎಂಬುದು ಇದರ ಮೂಲ ಹೆಸರಾಗಿತ್ತು. 

ಸೆಪ್ಟೆಂಬರ್ 1983 ರಲ್ಲಿ ಇದನ್ನು ಭಾರತೀಯ ನೌಕಾಪಡೆಗೆ ಸೇರಿಸಿಕೊಳ್ಳಲಾಗಿತ್ತು.