ಅಮೆರಿಕದಲ್ಲಿ ಭಾರತೀಯರ ಮೇಲಿನ ಹಲ್ಲೆ ಮತ್ತು ಹತ್ಯೆ ಘಟನೆಗಳು ಮುಂದುವರಿದಿವೆ. ಈಗ ಮತ್ತೋರ್ವ ಭಾರತೀಯನನ್ನು, ದರೋಡೆಗೆ ಯತ್ನಿಸಿದ ಸಶಸ್ತ್ರಧಾರಿ ಗುಂಪೊಂದು ಗುಂಡಿಟ್ಟು ಹತ್ಯೆಗೈದಿದೆ.

ವಾಷಿಂಗ್ಟನ್ (ಡಿ.30): ಅಮೆರಿಕದಲ್ಲಿ ಭಾರತೀಯರ ಮೇಲಿನ ಹಲ್ಲೆ ಮತ್ತು ಹತ್ಯೆ ಘಟನೆಗಳು ಮುಂದುವರಿದಿವೆ. ಈಗ ಮತ್ತೋರ್ವ ಭಾರತೀಯನನ್ನು, ದರೋಡೆಗೆ ಯತ್ನಿಸಿದ ಸಶಸ್ತ್ರಧಾರಿ ಗುಂಪೊಂದು ಗುಂಡಿಟ್ಟು ಹತ್ಯೆಗೈದಿದೆ. ಗುಜರಾತ್ ಮೂಲದ ವಿದ್ಯಾರ್ಥಿ ಅರ್ಷದ್ ವೋರಾ(19) ಮೃತ ದುರ್ದೈವಿ.

ಶಿಕಾಗೋದ ಕ್ಲಾರ್ಕ್ ಗ್ಯಾಸ್ ಸ್ಟೇಷನ್‌ನಲ್ಲಿ ಗುರುವಾರ ನಡೆದ ಈ ದಾಳಿಯಲ್ಲಿ ಈತ ಸತ್ತಿದ್ದಾನೆ. ಕನ್ವಿನಿಯೆನ್ಸ್ ಸ್ಟೋರ್‌ನಲ್ಲಿ ದರೋಡೆಗೆ ಯತ್ನಿಸಿದ ಗುಂಪೊಂದು ಇಬ್ಬರು ಭಾರತೀಯರ ಮೇಲೆ ಗುಂಡಿನ ದಾಳಿ ಮಾಡಿದೆ. ಹಂತಕರು ಪರಾರಿಯಾಗಿದ್ದು, ಅವರ ಸೆರೆಗೆ ಬಲೆ ಬೀಸಲಾಗಿದೆ.