ಐಸಿಸ್‌ ಉಗ್ರರ ನಂಟಿರುವ ಭಾರತೀಯ ಮೂಲದ ಮಹಿಳೆ ಮತ್ತು ಆಕೆಯ ಸಂಗಾತಿ ದಕ್ಷಿಣ ಆಫ್ರಿಕಾದಲ್ಲಿ ಬಂಧಿತರಾಗಿದ್ದಾರೆ. ಬ್ರಿಟಿಷ್‌ ದಂಪತಿಯನ್ನು ಅಪಹರಿಸಿದ ಆರೋಪದಲ್ಲಿ ಬಂಧನ ನಡೆದಿದೆ.

ಜೊಹಾನ್ಸ್‌ಬರ್ಗ್‌: ಐಸಿಸ್‌ ಉಗ್ರರ ನಂಟಿರುವ ಭಾರತೀಯ ಮೂಲದ ಮಹಿಳೆ ಮತ್ತು ಆಕೆಯ ಸಂಗಾತಿ ದಕ್ಷಿಣ ಆಫ್ರಿಕಾದಲ್ಲಿ ಬಂಧಿತರಾಗಿದ್ದಾರೆ. ಬ್ರಿಟಿಷ್‌ ದಂಪತಿಯನ್ನು ಅಪಹರಿಸಿದ ಆರೋಪದಲ್ಲಿ ಬಂಧನ ನಡೆದಿದೆ.

ಕ್ವಾಜುಲುನಾಟಲ್‌ನ ಬಿವೇನ್‌ ಅಣೆಕಟ್ಟು ಬಳಿ ಪ್ರವಾಸದಲ್ಲಿದ್ದ ಕೇಪ್‌ಟೌನ್‌ ಮೂಲದ ದಂಪತಿಯನ್ನು ಅಪಹರಿಸಿ, ಅವರ ಸ್ವತ್ತುಗಳನ್ನು ದೋಚಲಾಗಿತ್ತು. ಈ ಸಂಬಂಧ ಫಾತಿಮಾ ಪಟೇಲ್‌ ಮತ್ತು ಸಫಿದೀನ್‌ ಅಸ್ಲಾಂ ಡೆಲ್‌ ವೆಚ್ಚಿಯೊ ಎಂಬವರ ವಿರುದ್ಧ ಆರೋಪ ದಾಖಲಾಗಿದೆ.

ಗ್ರಾಮೀಣ ಪ್ರದೇಶವೊಂದರಲ್ಲಿ ಐಸಿಸ್‌ ಧ್ವಜ ಹಾರಿಸಿದ ಆರೋಪವೂ ಬಂಧಿತರ ವಿರುದ್ಧ ದಾಖಲಾಗಿದೆ. ಐಸಿಸ್‌ ಬೆಂಬಲಿತ ಉಗ್ರವಾದಿ ವೆಬ್‌ ವೇದಿಕೆಗಳಲ್ಲಿ ಭಾಗವಹಿಸಿದ ಮತ್ತು ಸಿಮ್‌ ಕಾರ್ಡ್‌ಗಳನ್ನು ಪೂರೈಸಿದ ಆರೋಪವೂ ಸಫಿದೀನ್‌ ವಿರುದ್ಧ ಕೇಳಿಬಂದಿದೆ. ಬಂಧಿತರನ್ನು ಕೋರ್ಟ್‌ಗೆ ಹಾಜರು ಪಡಿಸಲಾಗಿದ್ದು, ಅವರನ್ನು ವೆಸ್ಟ್‌ವಿಲ್ಲೆ ಜೈಲಿನ ವಶಕ್ಕೆ ಒಪ್ಪಿಸಲಾಗಿದೆ.

ಇದಕ್ಕೂ ಮೊದಲು 2016ರಲ್ಲಿ ಐಸಿಸ್‌ ಕುಮ್ಮಕ್ಕಿನಿಂದ ನಡೆದ ಉಗ್ರರ ದಾಳಿಯ ಯೋಜನೆ ರೂಪಿಸಿದ್ದ ಬ್ರಾಂಡನ್‌ ಲೀ ಮತ್ತು ಟೋನಿ ಲೀ ಬಂಧನದ ಬಳಿಕ ನಡೆದ ಪೊಲೀಸ್‌ ದಾಳಿಯ ವೇಳೆ ಕೂಡ, ಫಾತಿಮಾ ಪಟೇಲ್‌ ಮತ್ತು ಆಕೆಯ ಸಹೋದರ ಇಬ್ರಾಹೀಂ ಪಟೇಲ್‌ ಬಂಧಿತರಾಗಿದ್ದರು. ಬಳಿಕ ಅವರು ಜಾಮೀನಿನ ಮೂಲಕ ಬಿಡುಗಡೆಗೊಂಡಿದ್ದರು.