Asianet Suvarna News Asianet Suvarna News

ಭಾರತದ ನ್ಯಾಯಾಂಗ ವಿಶ್ವದಲ್ಲೇ ಬಲಿಷ್ಠ: ನ್ಯಾ ದೀಪಕ್‌ ಮಿಶ್ರಾ

ನ್ಯಾ ಮಿಶ್ರಾ ಅವರು ಇಂದು ನಿವೃತ್ತರಾಗಲಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ ಆವರಣದಲ್ಲಿ ಸೋಮವಾರ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು. ಅಲ್ಲಿ ಮಾತನಾಡಿದ ಮುಖ್ಯ ನ್ಯಾಯಮೂರ್ತಿಗಳು, ನ್ಯಾಯಕ್ಕೆ ಮಾನವೀಯ ಮುಖವಿರಲೇಬೇಕು. ಇತಿಹಾಸ ಎಂಬುದು ಕೆಲವೊಮ್ಮೆ ದಯೆಯಿಂದಿರಬಹುದು, ಮತ್ತೆ ಕೆಲವೊಮ್ಮೆ ಕ್ರೂರವಾಗಿರಬಹುದು. ಆದರೆ, ನಾನಂತೂ ಜನರನ್ನು ಅವರ ಇತಿಹಾಸದಿಂದ ಅಳೆಯುವುದಿಲ್ಲ. ಬದಲಾಗಿ ಅವರ ಚಟುವಟಿಕೆ, ದೃಷ್ಟಿಕೋನದಿಂದ ತೀರ್ಮಾನಿಸುತ್ತೇನೆ ಎಂದು ತಿಳಿಸಿದರು.

Indian judiciary strongest most robust in the world Says CJI Dipak Misra
Author
New Delhi, First Published Oct 2, 2018, 9:44 AM IST
  • Facebook
  • Twitter
  • Whatsapp

ನವದೆಹಲಿ(ಅ.02): ಭಾರತದ ನ್ಯಾಯಾಂಗ ವಿಶ್ವದಲ್ಲೇ ಬಲಿಷ್ಠವಾಗಿದೆ. ಅಸಂಖ್ಯಾತ ಪ್ರಕರಣಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಹೇಳಿದ್ದಾರೆ.

ನ್ಯಾ ಮಿಶ್ರಾ ಅವರು ಇಂದು ನಿವೃತ್ತರಾಗಲಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ ಆವರಣದಲ್ಲಿ ಸೋಮವಾರ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು. ಅಲ್ಲಿ ಮಾತನಾಡಿದ ಮುಖ್ಯ ನ್ಯಾಯಮೂರ್ತಿಗಳು, ನ್ಯಾಯಕ್ಕೆ ಮಾನವೀಯ ಮುಖವಿರಲೇಬೇಕು. ಇತಿಹಾಸ ಎಂಬುದು ಕೆಲವೊಮ್ಮೆ ದಯೆಯಿಂದಿರಬಹುದು, ಮತ್ತೆ ಕೆಲವೊಮ್ಮೆ ಕ್ರೂರವಾಗಿರಬಹುದು. ಆದರೆ, ನಾನಂತೂ ಜನರನ್ನು ಅವರ ಇತಿಹಾಸದಿಂದ ಅಳೆಯುವುದಿಲ್ಲ. ಬದಲಾಗಿ ಅವರ ಚಟುವಟಿಕೆ, ದೃಷ್ಟಿಕೋನದಿಂದ ತೀರ್ಮಾನಿಸುತ್ತೇನೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಮಾತನಾಡಿದ ನಿಯೋಜಿತ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌, ನ್ಯಾ ಮಿಶ್ರಾ ಅವರು ಎದ್ದು ಕಾಣುವ ನ್ಯಾಯಾಧೀಶ. ಸಂವಿಧಾನದ ಆದರ್ಶಗಳಿಗೆ ನಾವು ಬದ್ಧವಾಗಿರಲು ವಿಫಲವಾದರೆ, ಜನರನ್ನು ಕೊಲ್ಲುವುದನ್ನು ಹಾಗೂ ದ್ವೇಷಿಸುವುದನ್ನು ಮುಂದುವರಿಸುತ್ತೇವೆ ಎಂದರು.

Follow Us:
Download App:
  • android
  • ios