ಛತ್ತೀಸ್‌'ಗಡದ ನಕ್ಸಲ್ ಪೀಡಿತ ಬಸ್ತರ್ ಜಿಲ್ಲೆಯ ವಿವಿಧ ಪ್ರದೇಶಗಳ ಕುರಿತಾಗಿನ ವರದಿಗಾಗಿ ಈ ಪ್ರಶಸ್ತಿ ಒಲಿದಿದೆ. ಮಾಲಿನಿ ಸುಬ್ರಮಣಿಯಂ ಜತೆ ವಿಶ್ವದ ಇತರ ಮೂವರು ಪತ್ರಕರ್ತರೂ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ನ್ಯೂಯಾರ್ಕ್(ನ.23): ಸ್ವತಂತ್ರ ಮಾಧ್ಯಮಕ್ಕೆ ಒತ್ತು ನೀಡುವ ಪತ್ರಕರ್ತರಿಗೆ ನೀಡಲಾಗುವ ‘ಅಂತಾರಾಷ್ಟ್ರೀಯ ಪತ್ರಿಕಾ ಸ್ವಾತಂತ್ರ್ಯ’ ಪ್ರಶಸ್ತಿಗೆ ಭಾರತದ ಪತ್ರಕರ್ತೆ ಮಾಲಿನಿ ಸುಬ್ರಮಣಿಯಂ ಅವರು ಭಾಜನರಾಗಿದ್ದಾರೆ.
ಛತ್ತೀಸ್'ಗಡದ ನಕ್ಸಲ್ ಪೀಡಿತ ಬಸ್ತರ್ ಜಿಲ್ಲೆಯ ವಿವಿಧ ಪ್ರದೇಶಗಳ ಕುರಿತಾಗಿನ ವರದಿಗಾಗಿ ಈ ಪ್ರಶಸ್ತಿ ಒಲಿದಿದೆ. ಮಾಲಿನಿ ಸುಬ್ರಮಣಿಯಂ ಜತೆ ವಿಶ್ವದ ಇತರ ಮೂವರು ಪತ್ರಕರ್ತರೂ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ನಕ್ಸಲ್ ಪೀಡಿತ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಪೊಲೀಸರ ದೌರ್ಜನ್ಯ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅಪ್ರಾಪ್ತರ ಬಂಧನ, ಶಾಲೆಗಳ ಸ್ಥಗಿತ, ಕಾನೂನು ರಹಿತವಾಗಿ ಸಾರ್ವಜನಿಕರ ಹತ್ಯೆ ಮತ್ತು ಪತ್ರಕರ್ತರಿಗೆ ಬೆದರಿಕೆಯಂಥ ಘಟನೆಗಳ ಮಾಲಿನಿ ಸುಬ್ರಮಣಿಯಂ ವರದಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಅಂತಾರಾಷ್ಟ್ರೀಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ ಎಂದು ಪತ್ರಕರ್ತರ ರಕ್ಷಣಾ ಸಮಿತಿ ಹೇಳಿದೆ.
