Asianet Suvarna News Asianet Suvarna News

ಅಮೆರಿಕದಲ್ಲಿ 800 ಅಡಿ ಪ್ರಪಾತಕ್ಕೆ ಬಿದ್ದ ಭಾರತೀಯ ದಂಪತಿ ಸಾವು!

ಅಮೆರಿಕದಲ್ಲಿ ಭಾರತೀಯ ದಂಪತಿ ದುರಂತ ಸಾವು! 800 ಅಡಿ ಪ್ರಪಾತಕ್ಕೆ ಬಿದ್ದ ನವದಂಪತಿ ದುರಂತ ಅಂತ್ಯ! ಯೋಸಿಮಿಟಿ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದ ಭೀಕರ ಘಟನೆ! ವಿಷ್ಣು ವಿಶ್ವನಾಥ್ ಮತ್ತು ಮೀನಾಕ್ಷಿ ಮೂರ್ತಿ ಮೃತ ಭಾರತೀಯ ದಂಪತಿ! ಉದ್ಯಾನವನದ ಇತಿಹಾಸದಲ್ಲೇ ನಡೆದ ಅತ್ಯಂತ ದುರಂತಮಯ ಪ್ರಕರಣ! ಪ್ರಕರಣದ ತನಿಖೆ ಕೈಗೆತ್ತಿಕೊಂಡ ಫೆಡರಲ್ ಪೊಲೀಸರು

Indian Couple Falls 800 Feet In US Park
Author
Bengaluru, First Published Oct 30, 2018, 12:05 PM IST
  • Facebook
  • Twitter
  • Whatsapp

ನ್ಯೂಯಾರ್ಕ್(ಅ.30): ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಯೋಸಿಮಿಟಿ ರಾಷ್ಟ್ರೀಯ ಉದ್ಯಾನವನದಲ್ಲಿ ಭಾರತೀಯ ಮೂಲದ ದಂಪತಿ ಸುಮಾರು 800 ಅಡಿ ಕೆಳಗೆ ಜಾರಿ ಬಿದ್ದ ಮೃತಪಟ್ಟ ಘಟನೆ ನಡೆದಿದೆ.

ಭಾರತೀಯ ಮೂಲದ ವಿಷ್ಣು ವಿಶ್ವನಾಥ್ ಮತ್ತು ಮೀನಾಕ್ಷಿ ಮೂರ್ತಿ ದಂಪತಿಯೇ ಪ್ರಾಣ ಕಳೆದುಕೊಂಡ ದುರ್ದೈವಿಗಳಾಗಿದ್ದಾರೆ. ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನೆಲೆಸಿದ್ದ ದಂಪತಿ ಯೋಸಿಮಿಟಿ ನ್ಯಾಶನಲ್ ಪಾರ್ಕ್ ವೀಕ್ಷಿಸಲು ಬಂದಿದ್ದರು ಎನ್ನಲಾಗಿದೆ.

ವಿಷ್ಣು ವಿಶ್ವನಾಥ್ ಮತ್ತು ಮೀನಾಕ್ಷಿ ಮೂರ್ತಿ ಅವರ ಶವ 800 ಅಡಿ ಪ್ರಪಾತದಲ್ಲಿ ದೊರೆತಿದ್ದು, ಇದು ಯೋಸಿಮಿಟಿ ರಾಷ್ಟ್ರೀಯ ಉದ್ಯಾನವನದ ಇತಿಹಾಸದಲ್ಲೇ ನಡೆದ ಅತ್ಯಂತ ದುರಂತಮಯ ಪ್ರಕರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Indian Couple Falls 800 Feet In US Park

ಸದ್ಯ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಕುರಿತು ಹೆಚ್ಚಿನ ತನಿಖೆಯ ಅಗತ್ಯವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಿಷ್ಣು ಮತ್ತು ಮೀನಾಕ್ಷಿ ಅಷ್ಟೊಂದು ತುದಿಗೆ ತಲುಪಿದ್ದು ಯಾಕೆ?, ಇಬ್ಬರೂ ಒಟ್ಟಿಗೆ ಜಾರಿ ಬೀಳಲು ಕಾರಣವೇನು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios