ಜಗತ್ತಿನ ಟಾಪ್ 20 ಮಲಿನ ನಗರಗಳಲ್ಲಿ ಭಾರತದ 15| ಗ್ರೀನ್‌ಪೀಸ್ ಸಹಯೋಗದ ವಾಯುಗುಣಮಟ್ಟವರದಿಯಲ್ಲಿದೆ ಆತಂಕದ ಅಂಶ| ಗುಡಗಾಂವ್ ವಿಶ್ವದ ಅತಿ ಮಲಿನ ನಗರಿ
ನವದೆಹಲಿ[ಮಾ.06]: ‘ಜಗತ್ತಿನ ಅತಿ ಮಲಿನ 20 ನಗರಗಳ ಪಟ್ಟಿಯಲ್ಲಿ ಭಾರತದ 15 ನಗರಗಳು ಸ್ಥಾನ ಪಡೆದಿವೆ’ ಎಂದು ವರದಿಯೊಂದು ಹೇಳಿದೆ. ‘ಗ್ರೀನ್‌ಪೀಸ್ ಆಗ್ನೇಯ ಏಷ್ಯಾ’ ಸಂಸ್ಥೆ ಸಹಯೋಗದಲ್ಲಿ ಸಿದ್ಧಪಡಿಸಲಾಗಿರುವ ‘ಐಕ್ಯುಏರ್ ಏರ್ ವಿಷುವಲ್ ಕ್ವಾಲಿಟಿ ರಿಪೋರ್ಟ್-2018’ ಹೆಸರಿನ ವಾಯು ಗುಣಮಟ್ಟವರದಿಯಲ್ಲಿ, ದೆಹಲಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳನ್ನು ಒಳಗೊಂಡ ರಾಷ್ಟ್ರ ರಾಜಧಾನಿ ವಲಯವು ಕಳೆದ ಸಾಲಿನಲ್ಲಿ ವಿಶ್ವದಲ್ಲೇ ಅತಿ ಮಲಿನ ಪ್ರದೇಶ ಎಂಬ ಅಪಖ್ಯಾತಿಗೆ ಪಾತ್ರವಾಗಿದ್ದರೆ, ‘ಮಲಿನ ರಾಜಧಾನಿಗಳು’ ಪಟ್ಟಿಯಲ್ಲಿ ದಿಲ್ಲಿ ಮೊದಲ ಸ್ಥಾನ ಗಳಿಸಿ ಇರುಸು-ಮುರುಸಿಗೆ ಕಾರಣವಾಗಿದೆ.
ವಿಶ್ವದ ಟಾಪ್ 20 ಮಲಿನ ನಗರಗಳಲ್ಲಿ ಭಾರತದ 15 ನಗರಗಳು ಸ್ಥಾನ ಗಳಿಸಿವೆ. ಪಟ್ಟಿಯಲ್ಲಿ ಗುಡಗಾಂವ್ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಕ್ರಮವಾಗಿ ಗಾಜಿಯಾಬಾದ್, ಪಾಕಿಸ್ತಾನದ ಫೈಸಲಾಬಾದ್, ಭಾರತದ ಫರೀದಾಬಾದ್, ಭಿವಾಡಿ, ನೋಯ್ಡಾ, ಪಟನಾ, ಚೀನಾದ ಹೋಟಾನ್, ಲಖನೌ, ಪಾಕಿಸ್ತಾನದ ಲಾಹೋರ್, ಭಾರತದ ದೆಹಲಿ, ಜೋಧಪುರ, ಮುಜಫ್ಫರ್‌ಪುರ, ವಾರಾಣಸಿ, ಮೊರಾದಾಬಾದ್, ಆಗ್ರಾ, ಗಯಾ ಹಾಗೂ ಜಿಂದ್ ಇವೆ.
ಎಚ್ಚರಿಕೆ:
ವಾಯುಮಾಲಿನ್ಯ ಅತಿ ಅಪಾಯಕಾರಿಯಾಗಿದ್ದು, ವಾರ್ಷಿಕ ಸುಮಾರು 70 ಲಕ್ಷ ಜನರು ತಮ್ಮ ಸರಾಸರಿ ಜೀವಿತಾವಧಿ ಮುನ್ನವೇ ವಾಯುಮಾಲಿನ್ಯದಿಂದ ಸಾವನ್ನಪ್ಪುತ್ತಾರೆ ಎಂದು ಗ್ರೀನ್‌ಪೀಸ್ ವರದಿ ಎಚ್ಚರಿಸಿದೆ.
ಕಾರಣ ಏನು?:
ಮಾಲಿನ್ಯಕ್ಕೆ ಉದ್ದಿಮೆಗಳು, ಮನೆಗಳು, ಕಾರು, ವಾಹನಗಳು ಹೆಚ್ಚು ಕೊಡುಗೆ ನೀಡುತ್ತವೆ ಎಂದು ವರದಿ ಹೇಳಿದೆ. ಇನ್ನು ವಿದ್ಯುತ್ ಉತ್ಪಾದನಾ ಘಟಕಗಳು, ತ್ಯಾಜ್ಯ ಸುಡುವಿಕೆಯಿಂದಲೂ ಮಾಲಿನ್ಯ ಹರಡುತ್ತದೆ ಎಂದು ಒತ್ತಿ ಹೇಳಲಾಗಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 6, 2019, 10:00 AM IST