ಲಂಡನ್‌[ಜು.12]: ಭಾರತದ ಖ್ಯಾತ ಲೇಖಕ ಜೀತ್‌ ಥಾಯಿಲ್‌ ಅವರನ್ನು ಇಂಗ್ಲಿಷ್‌ ಸಾಹಿತ್ಯಕ್ಕೆ ನೀಡಲಾಗುವ ವಿಶ್ವದ ಪ್ರತಿಷ್ಠಿತ ಪುರಸ್ಕಾರಗಳಲ್ಲಿ ಒಂದಾದ ಅಂತಾರಾಷ್ಟ್ರೀಯ ಬುಕರ್‌ ಪ್ರಶಸ್ತಿಯ ಐದು ಮಂದಿ ಆಯ್ಕೆ ಸಮಿತಿಯಲ್ಲಿ ಒಬ್ಬರನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ. ಗುರುವಾರ ಲಂಡನ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ.

ಮುಂದಿನ ವರ್ಷದ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಈಗಾಗಲೆ ಚಾಲನೆ ನೀಡಲಾಗಿದೆ. 2019 ಮೇನಿಂದ 2020 ಏಪ್ರಿಲ್‌ ಅವಧಿಯಲ್ಲಿ ಲಂಡನ್‌ ಮತ್ತು ಐರ್ಲೆಂಡ್‌ಗಳಲ್ಲಿ ಪ್ರಕಾಶನಗೊಂಡ ಪುಸ್ತಕಗಳು ಈ ಪ್ರಶಸ್ತಿಗೆ ಅರ್ಹವಾಗಿರುತ್ತವೆ.

ಕೇರಳ ಮೂಲದವರಾದ ಜೀತ್‌ ಥಾಯಿಲ್‌ ಅವರ ನಾರ್ಕೊಪೊಲೀಸ್‌ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಸಂಗೀತಕಾರರೂ ಆಗಿರುವ ಜೀತ್‌ ತ್ಯಾಗಿ ಅವರು ಮುಂಬೈ, ಬೆಂಗಳೂರು, ಹಾಂಕಾಂಗ್‌ ಮತ್ತು ನ್ಯೂಯಾರ್ಕ್ಗಳಲ್ಲಿ ಪತ್ರಕರ್ತರಾಗಿಯೂ ಸೇವೆ ಸಲ್ಲಿಸಿದ್ದಾರೆ. ಜೀತ್‌ ಅವರು ಖ್ಯಾತ ಪತ್ರಕರ್ತ, ಅಂಕಣಕಾರ ಟಿ.ಜೆ.ಎಸ್‌ ಜಾಜ್‌ರ್‍ ಅವರ ಪುತ್ರರಾಗಿದ್ದಾರೆ.