Asianet Suvarna News Asianet Suvarna News

ಶೀಘ್ರವೇ ಬರಲಿದೆ ಸ್ವದೇಶಿ ಬುಲೆಟ್‌ ಪ್ರೂಫ್‌ ಜಾಕೆಟ್‌

ಸೇನೆ ಹಾಗೂ ಅರೆಸೇನಾ ಪಡೆಗಳಿಗಾಗಿ ಕೇಂದ್ರ ಸರ್ಕಾರ ಅಮೆರಿಕದಿಂದ ಗುಂಡು ನಿರೋಧಕ ಕವಚಗಳನ್ನು ಖರೀದಿಸುತ್ತಿದೆ. ಈ ಒಂದು ಕವಚಕ್ಕೆ 1.5 ಲಕ್ಷ ರು. ಬೆಲೆ ಇದೆ. ಜತೆಗೆ ಒಂದು ಕವಚ 15ರಿಂದ 18 ಕೆ.ಜಿ.ವರೆಗೂ ತೂಕವಿದೆ. ಇಷ್ಟು ಮಣ ಭಾರದ ಜಾಕೆಟ್‌ ಧರಿಸಿ ಉಗ್ರರ ಜತೆ ಕಾದಾಡಬೇಕಾದ ಪರಿಸ್ಥಿತಿ ಯೋಧರಿಗಿದೆ.

Indian Army to get indigenous bullet proof jacket

ಅಮೆರಿಕದ ಜಾಕೆಟ್‌ಗಿಂತ ಉತ್ತಮ | ಬಳಕೆಗೆ ರಕ್ಷಣಾ ಸಚಿವಾಲಯ ಅಸ್ತು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ‘ಮೇಕ್‌ ಇನ್‌ ಇಂಡಿಯಾ' ಮಂತ್ರ ಜಪಿಸುತ್ತಿರುವಾಗಲೇ ಬಂಗಾಳಿ ವಿಜ್ಞಾನಿಯೊಬ್ಬರು ಕಡಿಮೆ ಬೆಲೆಯ, ಅತ್ಯಂತ ಕಡಿಮೆ ತೂಕದ ಸ್ವದೇಶಿ ‘ಬುಲೆಟ್‌ಪ್ರೂಫ್‌' ಜಾಕೆಟ್‌ವೊಂದನ್ನು ಅಭಿವೃದ್ಧಿಪಡಿಸಿದ್ದಾರೆ.

ಇದರ ಬಳಕೆಗೆ ರಕ್ಷಣಾ ಸಚಿವಾಲಯದ ಉನ್ನತಾಧಿಕಾರ ಸಮಿತಿ ಕೂಡ ಒಪ್ಪಿಗೆ ಸೂಚಿಸಿದೆ. ಇದರಿಂದಾಗಿ 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಯೋಧರು ಸಂಪೂರ್ಣವಾಗಿ ಭಾರತದಲ್ಲೇ ತಯಾರಾದ ಬುಲೆಟ್‌ಪ್ರೂಫ್‌ ಜಾಕೆಟ್‌ ಅನ್ನು ಧರಿಸಲು ಹಾದಿ ಸುಗಮವಾದಂತಾಗಿದೆ. ಜತೆಗೆ ರಕ್ಷಣಾ ಇಲಾಖೆ ಯ ಬೊಕ್ಕಸಕ್ಕೆ ಪ್ರತಿ ವರ್ಷ 20 ಸಾವಿರ ಕೋಟಿ ರು. ಉಳಿತಾಯವಾಗಲಿದೆ.

Indian Army to get indigenous bullet proof jacket

ಸೇನೆ ಹಾಗೂ ಅರೆಸೇನಾ ಪಡೆಗಳಿಗಾಗಿ ಕೇಂದ್ರ ಸರ್ಕಾರ ಅಮೆರಿಕದಿಂದ ಗುಂಡು ನಿರೋಧಕ ಕವಚಗಳನ್ನು ಖರೀದಿಸುತ್ತಿದೆ. ಈ ಒಂದು ಕವಚಕ್ಕೆ 1.5 ಲಕ್ಷ ರು. ಬೆಲೆ ಇದೆ. ಜತೆಗೆ ಒಂದು ಕವಚ 15ರಿಂದ 18 ಕೆ.ಜಿ.ವರೆಗೂ ತೂಕವಿದೆ. ಇಷ್ಟು ಮಣ ಭಾರದ ಜಾಕೆಟ್‌ ಧರಿಸಿ ಉಗ್ರರ ಜತೆ ಕಾದಾಡಬೇಕಾದ ಪರಿಸ್ಥಿತಿ ಯೋಧರಿಗಿದೆ.

ಇದನ್ನು ಮನಗಂಡ ಬಂಗಾಳಿ ವಿಜ್ಞಾನಿ ಪ್ರೊ| ಶಂತನು ಭೌಮಿಕ್‌ ಅತ್ಯಂತ ಕಡಿಮೆ ತೂಕದ, ಥರ್ಮೋ ಪ್ಲಾಸ್ಟಿಕ್‌ ಜಾಕೆಟ್‌ ಅನ್ನು ಅಭಿವೃದ್ಧಿಪಡಿ ಸಿದ್ದಾರೆ. ಈ ಜಾಕೆಟ್‌ ಬೆಲೆ .50 ಸಾವಿರ ವಿರಲಿದ್ದು, ತೂಕ 1.5 ಕೆ.ಜಿ.ಯಿರಲಿದೆ.

Follow Us:
Download App:
  • android
  • ios