ಕೇರಳ ಸಿಎಂ ಹೊಗಳಿದ ಸೇನಾ ಯೋಧ! ಪಿಣರಾಯಿ ಹೊಗಳಿದ್ದ ವಿಡಿಯೋ ವೈರಲ್! ವಿಡಿಯೋ ನಕಲಿ ಎಂದ ಭಾರತೀಯ ಸೇನೆ! ಸುಳ್ಳು ವದಂತಿ ಹರಡದಂತೆ ಸೇನೆ ಮನವಿ
ತಿರುವನಂತಪುರಂ(ಆ.20): ಕೇರಳ ಪ್ರವಾಹ ಸಂತ್ರಸ್ತರ ನೆರವಿಗಾಗಿ ಸಿಎಂ ಪಿಣರಾಯಿ ವಿಜಯನ್ ಕಾರ್ಯವನ್ನು ಭಾರತೀಯ ಸೇನಾ ಯೋಧನೋರ್ವ ಹೊಗಳಿದ್ದ ವಿಡಿಯೋ ಭಾರೀ ವೈರಲ್ ಆಗಿದ್ದು, ಇದನ್ನು ಸೇನೆ ಸ್ಪಷ್ಟವಾಗಿ ಅಲ್ಲಗಳೆದಿದೆ.
ಯೋಧನೋರ್ವ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರನ್ನು ಹೊಗಳಿರುವ ವಿಡಿಯೋ ಇದಾಗಿದ್ದು, ಸೇನಾ ಯೋಧರು ಈ ರೀತಿ ವಿಡಿಯೋ ಮಾಡುವುದಿಲ್ಲ ಎಂದು ಸೇನಾ ಮೂಲಗಳು ಸ್ಪಷ್ಟಪಡಿಸಿವೆ.
ಸೇನೆಯ ಕೆಲಸ ಪ್ರವಾಹ ಸಂತ್ರಸ್ತರನ್ನು ರಕ್ಷಿಸುವುದೇ ಹೊರತು, ಸರ್ಕಾರಗಳನ್ನು ಹೊಗಳುವುದಲ್ಲ ಎಂದಿರುವ ಸೇನಾ ವಕ್ತಾರರು, ಇದೊಂದು ನಕಲಿ ವಿಡಿಯೋ ಆಗಿದ್ದು, ಈ ರೀತಿಯ ಸುಳ್ಳು ಸುದ್ದಿಗಳಿಗೆ ಪ್ರಚಾರ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ.
