ಅಮೇರಿಕಾದಲ್ಲಿ ಜನಾಂಗೀಯ ದ್ವೇಷಕ್ಕೆ ಇಬ್ಬರು ಭಾರತೀಯರು ಸಾವನ್ನಪ್ಪಿರುವ ವಿಚಾರ ಇನ್ನೂ ಹಸಿಯಾಗಿದೆ. ಭಾರತೀಯರಿಗೆ ದೇಶ ಬಿಟ್ಟು ತೊಲಗಿ, ನಿಮ್ಮ ದೇಶಕ್ಕೆ ಹಿಂತಿರುಗಿ ಎನ್ನುವ ಘೋಷಣೆಯನ್ನು ಕೂಗಿದ್ದಾರೆ. ಅದೇ ಮಾದರಿಯಲ್ಲಿ ನ್ಯೂಜಿಲೆಂಡ್ ನಲ್ಲಿ ಭಾರತೀಯ ಮೂಲದ ವ್ಯಕ್ತಿ ನರಿಂದರ್ ವೀರ್ ಸಿಂಗ್ ಎಂಬುವವರಿಗೆ ಹೇಳಿದ್ದಾರೆ.
ಮೆಲ್ಬೋರ್ನ್ (ಮಾ.06): ಅಮೇರಿಕಾದಲ್ಲಿ ಜನಾಂಗೀಯ ದ್ವೇಷಕ್ಕೆ ಇಬ್ಬರು ಭಾರತೀಯರು ಸಾವನ್ನಪ್ಪಿರುವ ವಿಚಾರ ಇನ್ನೂ ಹಸಿಯಾಗಿದೆ. ಭಾರತೀಯರಿಗೆ ದೇಶ ಬಿಟ್ಟು ತೊಲಗಿ, ನಿಮ್ಮ ದೇಶಕ್ಕೆ ಹಿಂತಿರುಗಿ ಎನ್ನುವ ಘೋಷಣೆಯನ್ನು ಕೂಗಿದ್ದಾರೆ. ಅದೇ ಮಾದರಿಯಲ್ಲಿ ನ್ಯೂಜಿಲೆಂಡ್ ನಲ್ಲಿ ಭಾರತೀಯ ಮೂಲದ ವ್ಯಕ್ತಿ ನರಿಂದರ್ ವೀರ್ ಸಿಂಗ್ ಎಂಬುವವರಿಗೆ ಹೇಳಿದ್ದಾರೆ.
ನರಿಂದರ್ ವೀರ್ ಸಿಂಗ್ ತಮ್ಮ ವಾಹನದಲ್ಲಿ ಕುಳಿತು ಚಿತ್ರೀಕರಣ ಮಾಡುವ ಸಂದರ್ಭದಲ್ಲಿ ಇಲ್ಲಿನ ಅಕ್ಲಾಂಡ್ ನಲ್ಲಿ ರಸ್ತೆಯಲ್ಲಿ ಉದ್ರೇಕಕಾರಿ ಘಟನೆಯೊಂದು ನಡೆದಿದೆ.
ನಾನು ಅವರಿಗೆ ದಾರಿ ಬಿಟ್ಟು ಕೊಟ್ಟೆ. ಆ ಕಾರಿನಲ್ಲಿದ್ದ ಮಹಿಳೆ ನನಗೆ ಕೈ ತೋರಿಸಿದರು. ಕಾರಿನ ಚಾಲಕ ನನಗೆ ಹೊಡೆಯಲು ಮುಂದಾದ. ಕೆಟ್ಟದಾಗಿ ಬೈದ. ಎಂದು ನರಿಂದರ್ ವೀರ್ ಸಿಂಗ್ ಫೇಸ್ ಬುಕ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಇದನ್ನು ನಾನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡ್ತೀನಿ ಅಂತ ಡ್ರೈವರ್ ಗೆ ಹೇಳಿದಾಗ ಪರಿಸ್ತಿತಿ ಉಲ್ಬಣಗೊಂಡಿತು. ನನ್ನನ್ನು ನಿಂದಿಸಿದರು.ನಿನ್ನ ದೇಶಕ್ಕೆ ಹಿಂತಿರುಗು ಎಂದು ಹೇಳಿದ್ದಾರೆ ಎಂದು ನರಿಂದರ್ ವೀರ್ ಸಿಂಗ್ ಹೇಳಿಕೊಂಡಿದ್ದಾರೆ.
