Asianet Suvarna News Asianet Suvarna News

ನಮಗೆ ಶಾಂತಿ ಬೇಕು, ಆದ್ರೆ ಆತ್ಮ ಗೌರವ ಬಲಿಕೊಟ್ಟಲ್ಲ: ಮೋದಿ ಮನ್ ಕಿ ಬಾತ್!

ಸೈನಿಕರಿಗಾಗಿ ಮೀಸಲಿಟ್ಟ ಪ್ರಧಾನಿ ಮೋದಿ ಮನ್ ಕಿ ಬಾತ್! ಮನ ಕಿ ಬಾತ್ ನಲ್ಲಿ ಸೈನಿಕರನ್ನು ಹೊಗಳಿದ ಪ್ರಧಾನಿ ಮೋದಿ! ಸರ್ಜಿಕಲ್ ದಾಳಿ ಸೇನೆಯ ಸಾಮರ್ಥ್ಯಕ್ಕೆ ಸಾಕ್ಷಿ ಎಂದ ಮೋದಿ! ಶಾಂತಿಗೆ ಬದ್ಧ ಆದರೆ ಆತ್ಮ ಗೌರವ ಬಲಿಕೊಟ್ಟಲ್ಲ ಎಂದ ಪ್ರಧಾನಿ

India will stand for world peace but not at cost of self-respect says PM
Author
Bengaluru, First Published Sep 30, 2018, 4:43 PM IST

ನವದೆಹಲಿ(ಸೆ.30): ಭಾರತಕ್ಕೆ ಶಾಂತಿ ಮುಖ್ಯ, ಆದರೆ ನಮ್ಮ ಆತ್ಮ ಗೌರವವನ್ನು ಬಲಿ ಕೊಡುವ ಮೂಲಕವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇಂದು ಮನ್ ಕಿ ಬಾತ್ ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತ ಶಾಂತಿಯನ್ನು ಬಯಸುತ್ತದೆ. ಆದರೆ ಅದಕ್ಕಾಗಿ ನಮ್ಮ ಆತ್ಮಗೌರವವನ್ನು ಬಲಿ ಕೊಡುವುದಿಲ್ಲ. ಬಹುಶಃ ನಮ್ಮ ಸೈನಿಕರು ಯಾವುದೇ ಪರಿಸ್ಥಿತಿಗೂ ಸೂಕ್ತ ಉತ್ತರ ನೀಡಲಿದ್ದಾರೆ ಎಂಬುದು ಬಹುಶಃ ಎಲ್ಲರಿಗೂ ಅರ್ಥವಾಗಿರಬೇಕು ಎಂದು ಮೋದಿ ಪಾಕಿಸ್ತಾನವನ್ನು ಚುಚ್ಚಿದ್ದಾರೆ.

ಎಂತಹುದೇ ಪರಿಸ್ಥಿತಿಯಲ್ಲಿ ಭಾರತದ ಶಾಂತಿ ಕದಡಲು ನಮ್ಮ ಸೈನಿಕರು ಅನುವು ಮಾಡಿಕೊಡುವುದಿಲ್ಲ. ಶಾಂತಿಗೆ ನಾವು ಖಂಡಿತಾ ಬದ್ಧ ಆದರೆ, ಸ್ವಾಭಿಮಾನ ಮತ್ತು ಸಾರ್ವಭೌಮತ್ವದ ಬಲಿ ಕೊಡುವುದರಲ್ಲಿ ಅರ್ಥವಿಲ್ಲ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಿ ಮೋದಿ ತಮ್ಮ ಮನ್ ಕಿ ಬಾತ್ ನಲ್ಲಿ ಭಾರತೀಯ ಸೇನೆ ಮತ್ತು ಗಡಿ ಭದ್ರತೆ ಕುರಿತು ಮಾತನಾಡಿದರು. ಭಾರತದ ಪ್ರತೀಯೋರ್ವ ಯುವಕನೂ ಭಾರತೀಯ ಸೇನೆ ಕುರಿತು ಅರಿಯಬೇಕು ಎಂದು ಹೇಳಿದರು. ವಿಶ್ವಯುದ್ಧದ ಸಂದರ್ಭದಲ್ಲಿ ದೇಶದ 2 ಲಕ್ಷಕ್ಕೂ ಅಧಿಕ ಮಂದಿ ಸೈನಿಕರು ಬಲಿದಾನ ಮಾಡಿದ್ದಾರೆ. ನಮ್ಮ ಧ್ಯೇಯ ಕೇವಲ ವಿಶ್ವಶಾಂತಿ ಎಂಬುದು ಇದರಿಂದಲೇ ತಿಳಿಯುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.

Follow Us:
Download App:
  • android
  • ios