ಕೇಂದ್ರ ಸರ್ಕಾರ ನಗದು ರಹಿತ ಆರ್ಥಿಕತೆಯನ್ನು ನಿರ್ಮಾಣ ಮಾಡಲು ಹೊರಟಿರುವ ಹಿನ್ನೆಲೆಯಲ್ಲಿ ಈ-ವಾಲೆಟ್ ಮುಖಾಂತರ ಡಿಜಿಟಲ್ ವ್ಯವಹಾರ ಮಾಡುವುದರಿಂದ 2017 ರಲ್ಲಿ ವಂಚನೆ ಪ್ರಮಾಣ ಶೇ.60-65 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

 ನವದೆಹಲಿ (ಡಿ.12): ಕೇಂದ್ರ ಸರ್ಕಾರ ನಗದು ರಹಿತ ಆರ್ಥಿಕತೆಯನ್ನು ನಿರ್ಮಾಣ ಮಾಡಲು ಹೊರಟಿರುವ ಹಿನ್ನೆಲೆಯಲ್ಲಿ ಈ-ವಾಲೆಟ್ ಮುಖಾಂತರ ಡಿಜಿಟಲ್ ವ್ಯವಹಾರ ಮಾಡುವುದರಿಂದ 2017 ರಲ್ಲಿ ವಂಚನೆ ಪ್ರಮಾಣ ಶೇ.60-65 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ಮೊಬೈಲ್ ವಂಚಕರು ಕಂಪನಿಗಳ ಮೇಲೆ ಕಣ್ಣಿಟ್ಟಿದ್ದು, ಬಹುಪಾಲು ಕಂಪನಿಗಳ ಶೇ. 40-45 ರಷ್ಟು ಹಣಕಾಸಿನ ವ್ಯವಹಾರ ಮೊಬೈಲ್ ಗಳ ಮೂಲಕ ನಡೆಯುತ್ತದೆ. 2017 ರಲ್ಲಿ ಶೇ. 60-65 ರಷ್ಟು ಮೊಬೈಲ್ ವಂಚನೆ ಹೆಚ್ಚಾಗುವ ಅಪಾಯವಿದೆ ಎಂದು ಅಧ್ಯಯನವೊಂದು ಹೇಳಿದೆ.

ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳ ವಂಚನೆ ಪ್ರಕರಣ ಕಳೆದ ಮೂರು ವರ್ಷಗಳಲ್ಲಿ 6 ಪಟ್ಟು ಹೆಚ್ಚಳವಾಗಿದೆ.