ಹೊಸ ವರ್ಷದ ದಿನ ಭಾರತದಲ್ಲಿ 69,944 ಮಕ್ಕಳ ಜನನ| ವಿಶ್ವ ದಾಖಲೆ
ನವದೆಹಲಿ[ಜ.02]: 2019ರ ಹೊಸ ವರ್ಷದ ಮೊದಲ ದಿನ ಭಾರತದಲ್ಲಿ 69,944 ಮಕ್ಕಳು ಜನಿಸಿವೆ ಎಂದು ಯುನಿಸೆಫ್ ಮಂಗಳವಾರ ಹೇಳಿದೆ.
ಇನ್ನು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾದಲ್ಲಿ 44,940 ಮಕ್ಕಳು, ನೈಜರಿಯಾದಲ್ಲಿ 25,685 ಜನಿಸಿವೆ. ಭಾರತದಲ್ಲಿ 69,944 ಸೇರಿದಂತೆ ವಿಶ್ವದಲ್ಲಿ 3,95,072 ಮಕ್ಕಳು ಈ ದಿನ ಜನಿಸಿವೆ ಎಂದು ಅದು ಮಾಹಿತಿ ನೀಡಿದೆ.
ಮಕ್ಕಳ ರಕ್ಷಣೆಯಲ್ಲಿ ಯುನಿಸೆಫ್ ಮಹತ್ವದ ಪಾತ್ರ ವಹಿಸುತ್ತಿದ್ದು, ಎಲ್ಲ ಮಕ್ಕಳು ಆರೋಗ್ಯವಂತ ಜೀವನ ನಡೆಸುವಂತಾಗಲು ಹೊಸ ವರ್ಷದಂದು ಎಲ್ಲರೂ ಬದ್ಧತೆ ಪ್ರಕಟಿಸಬೇಕು ಎಂದು ಕರೆ ನೀಡಿದೆ.
2017ರಲ್ಲಿ 10 ಲಕ್ಷ ಮಕ್ಕಳು ಹುಟ್ಟಿದ ದಿನದಂದೇ ಸಾವನ್ನಪ್ಪಿವೆ. 25 ಲಕ್ಷ ಮಕ್ಕಳು ಹುಟ್ಟಿದ ಮೊದಲ ತಿಂಗಳೊಳಗೇ ಅಸುನೀಗಿವೆ ಎಂದು ಅದು ಕಳವಳ ವ್ಯಕ್ತಪಡಿಸಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 2, 2019, 8:44 AM IST