ನವದೆಹಲಿ(ಸೆ.27):ಉರಿ ಸೇನಾ ಶಿಬಿರದ ಮೇಲಿನ ಉಗ್ರರ ದಾಳಿಯ ಹಿಂದೆ ತನ್ನ ಕೈವಾಡ ಇಲ್ಲ ಎಂದು ಪಾಕಿಸ್ತಾನ ಬೊಬ್ಬೆ ಹೊಡೆದು ಭಾರತದ ಮೇಲೆಯೇ ಗೂಬೆ ಕೂರಿಸುತ್ತಿರುವ ನಡುವೆಯೇ ಭಾರತದಲ್ಲಿರುವ ಪಾಕ್ ರಾಯಭಾರಿ ಅಬ್ದುಲ್ ಬಸಿತ್ ಗೆ ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಅವರು ಸಮನ್ಸ್ ನೀಡಿದ್ದಾರೆ. ಉರಿ ಭಯೋತ್ಪಾದನೆ ದಾಳಿಗೆ ಸಂಬಂಧಿಸಿದಂತೆ ಪಾಕ್ ಮೂಲದ ಉಗ್ರರ ಕೈವಾಡದ ಬಗ್ಗೆ ಸೂಕ್ತ ಪುರಾವೆಯನ್ನು ಒದಗಿಸಿದೆ. ಅಬ್ದುಲ್ ಬಾಸಿತ್ ಗೆ ಜೈಶಂಕರ್ ಅವರು ಉತ್ತರಿಸುವಂತೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ. ಅಲ್ಲದೇ ಉಗ್ರರು ಒಳನುಸುಳಲು ನೆರವು ನೀಡಿದ್ದ ಪಿಓಕೆಯ ಇಬ್ಬರನ್ನು ಸ್ಥಳೀಯರು ಬಂಧಿಸಿದ್ದರು. ಅವರೀಗ ಪೊಲೀಸ್ ವಶದಲ್ಲಿರುವುದಾಗಿ ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಟ್ವೀಟ್ ಮಾಡಿದ್ದಾರೆ.
ಪಾಕ್ ರಾಯಭಾರಿ ಅಬ್ದುಲ್ ಬಸಿತ್ಗೆ ಸಮನ್ಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.
Latest Videos
