36 ರಫೆಲ್ ಜೆಟ್ ಗಳನ್ನು ಖರೀದಿಸುವ 7.8 ಬಿಲಿಯನ್ ಯೂರೋ ಒಪ್ಪಂದಕ್ಕೆ ಸಹಿ
ನವದೆಹಲಿ(ಸೆ.23): ಇಂದು ಭಾರತದ ರಕ್ಷಣಾ ಇಲಾಖೆ ಪಾಲಿಗೆ ಮಹತ್ವದ ದಿನ. ಭಾರತವು ಫ್ರಾನ್ಸ್‌ನ ಅತ್ಯಂತ ವಿಶ್ವಾಸಾರ್ಹ ಮತ್ತು ನಿಕಟ ಮಿತ್ರ ಎಂಬುದು ಜಗತ್ ಜಾಹೀರಾದ ವಿಚಾರ. ಇದಕ್ಕೆ ಇನ್ನಷ್ಟು ಫುಷ್ಠಿ ನೀಡುವುದಕ್ಕೆ ಫ್ರಾನ್ಸ್ ತಮ್ಮಲ್ಲಿ ಉತ್ಪತ್ತಿ ಮಾಡಲಾದ ಅತ್ಯಂತ ಸಮರ್ಥ ಯುದ್ದ ವಿಮಾನವಾದ ರಫಲ್ ಜೆಟ್ ಯುದ್ದ ವಿಮಾನವನ್ನ ಭಾರತಕ್ಕೆ ನೀಡುವುದಕ್ಕೆ ಮುಂದಾಗಿದೆ. ಈ ಮಹತ್ವದ ಒಪ್ಪಂದಕ್ಕೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹಾಗೂ ಫ್ರೆಂಚ್ ನ ರಕ್ಷಣಾ ಸಚಿವರು ನವದೆಹಲಿಯಲ್ಲಿಂದು ಸಹಿ ಹಾಕಿದ್ದಾರೆ. 7.8 ಬಿಲಿಯನ್ ಯುರೋಗಳಿಗೆ 36 ರಫೆಲ್ ಜೆಟ್ ಗಳನ್ನು ಖರೀದಿಸುವ ಒಪ್ಪಂದಕ್ಕೆ ಸಹಿ ಬಿದ್ದಿದೆ.
ರಫೆಲ್ ಫೈಟರ್ ಜೆಟ್ ವೈಶಿಷ್ಟ್ಯವೇನು..?: ಇದು ರಾಫೆಲ್ ಮೆಟೊರೊ ಶ್ರೇಣಿಯ ಕ್ಷಿಪಣಿಯಾಗಿದ್ದು, 150 ಕಿ.ಮೀ ಸಾಗುವ ಸಾಮರ್ಥ್ಯ ಹೊಂದಿದೆ. ದೃಷ್ಠಿವ್ಯಾಪಿಗೂ ಮಿಗಿಲಾಗಿ ಸಾಗುವ ಸಾಮರ್ಥ್ಯ ಹೊಂದಿದ್ದು, ಈ ಕ್ಷಿಪಣಿಯಲ್ಲಿ ಗುರಿ ತಪ್ಪುವ ಸಾಧ್ಯತೆ ಇತರೆ ಕ್ಷಿಪಣಿಗಳಿಗಿಂತ ಮೂರುಪಟ್ಟು ಕಡಿಮೆಯಾಗಿದೆ. ಹೀಗಾಗಿ, ಒಮ್ಮೆ ಕ್ಷಿಪಣಿ ಉಡಾಯಿಸಿದ್ರೆ ಮುಗಿಯಿತು ಶತ್ರುಗಳು ಉಡೀಸ್.
ಸದ್ಯ, ಶತ್ರು ರಾಷ್ಟ್ರ ಪಾಕ್ನೊಂದಿಗೆ ಭಾರತದ ಸಂಬಂಧ ತೀರ ಹಳಸಿ ಹೋಗಿದೆ. ಹೀಗಾಗಿ, ಭವಿಷ್ಯದಲ್ಲಿನ ಯುದ್ದ ಸನ್ನಿವೇಶಗಳ ಸಾಧ್ಯತೆಯನ್ನ ತಳ್ಳಿ ಹಾಕುವಂತಿಲ್ಲ. ಹೀಗಾಗಿ, ಸಮರಕ್ಕೆ ಸಿದ್ದವಾಗುತ್ತಿರುವ ಭಾರತೀಯ ಸೇನೆಯ ವಾಯುದಳಕ್ಕೆ ಈಗ 300ಹಗುರ ಯುದ್ಧ ವಿಮಾನಗಳ ಅಗತ್ಯವಿದೆ. 2019ರ ವೇಳೆಗೆ ಸುಧಾರಿತ ಆವೃತ್ತಿಯ ರಫೆಲ್ ಫೈಟರ್ ಜೆಟ್ ವಿಮಾನ ವಾಯುದಳಕ್ಕೆ ಸೇರಬೇಕಿದೆ. ಎದುರಾಳಿಗಳನ್ನ ಸಮರ್ಥವಾಗಿ ಎದುರಿಸಲು ಸುಧಾರಿತ ಯುದ್ಧ ವಿಮಾನದಲ್ಲಿ ದೃಷ್ಟಿಗೆ ನಿಲುಕದ ಗುರಿಯನ್ನು ತಲುಪಬಲ್ಲ ರೆಫಲ್ ಫೈಟರ್ ಜೆಟ್ ಕ್ಷಿಪಣಿಯ ಅವಶ್ಯಕತೆ ಬಹಳಷ್ಟಿದೆ.
ವಾಯು ಸೇನೆಯ ಡಿಮ್ಯಾಂಡ್ಗೆ ರಕ್ಷಣಾ ಇಲಾಖೆ ಗ್ರೀನ್ ಸಿಗ್ನಲ್ ನೀಡಿರುವುದು ಸೇನೆಗೆ ಇನ್ನಷ್ಟು ಬಲ ಹೆಚ್ಚಿಸಿದೆ. ರಫೆಲ್ ಫೈಟರ್ ಜೆಟ್ ವಾಯು ಸೇನೆಗೆ ಎಂಟ್ರಿಯಾಗುತ್ತಿರುವುದು ಈಗ ಶತ್ರು ರಾಷ್ಟ್ರ ಪಾಕ್ನ ನಿದ್ರೆ ಕೆಡಿಸಿರೋದಂತೂ ನಿಜ..
