ಸಿಕ್ಕಿಂ ಸೆಕ್ಟರ್’ನಲ್ಲಿ ರಸ್ತೆ ನಿರ್ಮಾಣ ವಿಚಾರದಲ್ಲಿ ಭಾರತ ಹಾಗೂ ಚೀನಾ ನಡುವೆ ವಾಕ್ಸಮರ ನಡೆಯುತ್ತಿರುವ ಬೆನ್ನಲ್ಲೇ, ಭಾರತವು ಪ್ರಾದೇಶಿಕ ಅಭಿವೃದ್ಧಿಯಲ್ಲಿ ‘ಸಹಕಾರಿ ಪಾಲುದಾರ’ನಾಗಬೇಕೆಂದು ಚೀನಾ ಪತ್ರಿಕೆಯು ಕರೆ ನೀಡಿದೆ.

ಬೀಜಿಂಗ್ (ಜು.02): ಸಿಕ್ಕಿಂ ಸೆಕ್ಟರ್’ನಲ್ಲಿ ರಸ್ತೆ ನಿರ್ಮಾಣ ವಿಚಾರದಲ್ಲಿ ಭಾರತ ಹಾಗೂ ಚೀನಾ ನಡುವೆ ವಾಕ್ಸಮರ ನಡೆಯುತ್ತಿರುವ ಬೆನ್ನಲ್ಲೇ, ಭಾರತವು ಪ್ರಾದೇಶಿಕ ಅಭಿವೃದ್ಧಿಯಲ್ಲಿ ‘ಸಹಕಾರಿ ಪಾಲುದಾರ’ನಾಗಬೇಕೆಂದು ಚೀನಾ ಪತ್ರಿಕೆಯು ಕರೆ ನೀಡಿದೆ.

ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡರ್ (CPEC) ಬಗ್ಗೆ ಆತಂಕ ಬಿಟ್ಟು ಬೆಲ್ಟ್ & ರೋಡ್ ಯೋಜನೆಯಲ್ಲಿ ಪಾಲ್ಗೊಳ್ಳಬೇಕು. ಶತ್ರುವಾಗುವ ಬದಲು ಆಮೂಲಕ ಸಹಕಾರಿ ಪಾಲುದಾರನಾಗಬೇಕು ಎಂದು ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ಶೀನ್ಹುವಾ ಹೇಳಿದೆ.

ಕಳೆದ ಮೇನಲ್ಲಿ ನಡೆದ ಬೆಲ್ಟ್ & ರೋಡ್ ಫೋರುಮ್ (BRF) ಸಮ್ಮೇಳನವನ್ನು ಭಾರತವು ಬಹಿಷ್ಕರಿಸಿದನ್ನು ಟೀಕಿಸಿರುವ ಶೀನ್ಹುವಾ, ಭಾರತವು ‘ಚೀನಾ ಗಾಬರಿ’ಯನ್ನು ಬಿಟ್ಟುಬಿಡಬೇಕು ಎಂದು ಹೇಳಿದೆ.

$50 ಬಿಲಿಯನ್ ವೆಚ್ಚದ CPEC ಯೋಜನೆಯು ಪಾಕಿಸ್ತಾನ ಕ್ರಮಿತ ಕಾಶ್ಮೀರ (PoK) ಮೂಲಕ ಹಾದು ಹೋಗುತ್ತಿರುವುದರಿಂದ ಭಾರತವು BRF ಸಮ್ಮೇಳನವನ್ನು ಬಹಿಷ್ಕರಿಸಿತ್ತು. CPEC ವಿಚಾರದಲ್ಲಿ ಚೀನಾವು ಭಾರತದ ಸಾರ್ವಭೌಮತೆಯನ್ನು ಗೌರವಿಸಬೇಕೆಂದು ಕರೆನೀಡಿತ್ತು.

ಯೋಜನೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಅದರಿಂದಾಗುವ ಪ್ರಯೋಜನಗಳನ್ನರಿತು ಅದರಲ್ಲಿ ಪಾಲ್ಗೊಳ್ಳುವ ಬಗ್ಗೆ ಶೀನ್ಹುವಾ ಭಾರತಕ್ಕೆ ಕರೆನೀಡಿದೆ.