ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪಾಕಿಸ್ತಾನ ಹಿಂದೇಟು| ಪಾಕಿಸ್ತಾನದ ಕಳ್ಳಾಟಕ್ಕೆ ಭಾರತದ ತೀವ್ರ ಅಸಮಾಧಾನ| ‘ನಯಾ ಪಾಕಿಸ್ತಾನದಲ್ಲಿ ನಯಾ ಆ್ಯಕ್ಷನ್ ಎದುರು ನೋಡುತ್ತಿದ್ದೇವೆ’| ಭಾಋತದ ವಿದೇಶಾಂಗ ಕಾರ್ಯದರ್ಶಿ ರವೀಶ್ ಕುಮಾರ್ ತಿರುಗೇಟು| 

ನವದೆಹಲಿ(ಮಾ.09): ಪುಲ್ವಾಮಾ ದಾಳಿಯ ಸಾಕಷ್ಟು ಪುರಾವೆಗಳನ್ನು ಒದಗಿಸಿದ್ದರೂ ಪಾಕಿಸ್ತಾನ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ ಎಂದು ಭಾರತ ಆಪಾದಿಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತದ ವಿದೇಶಾಂಗ ಕಾರ್ಯದರ್ಶಿ ರವೀಶ್ ಕುಮಾರ್, ಒಂದು ವೇಳೆ ಪ್ರಧಾನಿ ಇಮ್ರಾನ್ ಖಾನ್ ಘೋಷಿಸಿದಂತೆ ನಯಾ ಪಾಕಿಸ್ತಾನ್(ಹೊಸ ಪಾಕಿಸ್ತಾನ), ನಯೀ ಸೋಚ್(ಹೊಸ ಆಲೋಚನೆ) ಇದ್ದರೆ ಉಗ್ರರ ವಿರುದ್ಧ ನಯಾ ಆ್ಯಕ್ಷನ್(ಹೊಸ ಕ್ರಮ)ಕೂಡ ತೆಗೆದುಕೊಳ್ಳುವುದು ಇಮ್ರಾನ್ ಖಾನ್ ಕರ್ತವ್ಯ ಎಂದು ಹೇಳಿದರು.

Scroll to load tweet…

ನಿನ್ನೆಯಷ್ಟೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮಾತನಾಡಿ, ಪಾಕಿಸ್ತಾನದ ನೆಲದಲ್ಲಿ ಉಗ್ರವಾದಕ್ಕೆ ಸ್ಥಾನವಿಲ್ಲ ಎಂದು ಘೋಷಿಸಿದ್ದರು. ಅಲ್ಲದೇ ನಿಷೇಧಿತ ಉಗ್ರ ಸಂಘಟನೆಗಳ ವಿರುದ್ಧ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಭಾರತ, ಉಗ್ರರ ವಿರುದ್ಧ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಲು ಪಾಕ್ ವಿಫಲವಾಗಿದೆ ಎಂದು ಆರೋಪಿಸಿದೆ. ಅಲ್ಲದೇ ನೆಪ ಮಾತ್ರಕ್ಕೆ ಕೆಲವರನ್ನು ಬಂಧಿಸಿ ಅಂತಾರಾಷ್ಟ್ರೀಯ ಸಮುದಾಯದ ದಿಕ್ಕು ತಪ್ಪಿಸುತ್ತಿದೆ ಎಂದು ಭಾರತ ಗಂಭೀರ ಆರೋಪ ಮಾಡಿದೆ.