ಹ್ಯಾಂಬರ್ಗ್‌'ನಲ್ಲಿ ನಡೆದ ಜಿ-20 ಸಮಾವೇಶದ ವೇಳೆ ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಅವರ ನಡುವಿನ ಮಾತುಕತೆಯನ್ನು ಉಲ್ಲೇಖಿಸಿದ ಬಾಗ್ಲೆ, ಇಬ್ಬರೂ ನಾಯಕರು ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಡೋಕ್ಲಾಮ್ ಬಿಕ್ಕಟ್ಟಿನ ಕುರಿತು ಹೇಳುವುದಾದರೆ ರಾಜತಾಂತ್ರಿಕ ವಿಧಾನವನ್ನೇ ಮುಂದುವರಿಸಲಾಗುವುದು.

ನವದೆಹಲಿ: ಡೋಕ್ಲಾಮ್‌'ನಲ್ಲಿ ಭಾರತ ಮತ್ತು ಚೀನಾ ಮಧ್ಯೆ ಸೃಷ್ಟಿಯಾಗಿರುವ ಬಿಕ್ಕಟ್ಟನ್ನು ರಾಜತಾಂತ್ರಿಕವಾಗಿ ಬಗೆಹರಿಸಿಕೊಳ್ಳಲಾಗುವುದು ಎಂದು ಭಾರತ ಗುರುವಾರ ಹೇಳಿದೆ. ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ವಿದೇಶಾಂಗ ಸಚಿವಾಲಯ ವಕ್ತಾರ ಗೋಪಾಲ್ ಬಾಗ್ಲೆ, ಈ ಹಿಂದೆ ಚೀನಾದ ಜೊತೆಗಿನ ವಿವಾದವನ್ನು ರಾಜತಾಂತ್ರಿಕವಾಗಿ ಬಗೆಹರಿಸಿಕೊಂಡ ರೀತಿಯಲ್ಲೇ, ಡೋಕ್ಲಾಮ್ ಬಿಕ್ಕಟ್ಟನ್ನು ಬಗೆಹರಿಸಲು ಎರಡೂ ದೇಶಗಳಿಗೆ ರಾಜತಾಂತ್ರಿಕ ಆಯ್ಕೆ ಲಭ್ಯವಿದೆ ಎಂದು ಹೇಳಿದ್ದಾರೆ.

ಹ್ಯಾಂಬರ್ಗ್‌'ನಲ್ಲಿ ನಡೆದ ಜಿ-20 ಸಮಾವೇಶದ ವೇಳೆ ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಅವರ ನಡುವಿನ ಮಾತುಕತೆಯನ್ನು ಉಲ್ಲೇಖಿಸಿದ ಬಾಗ್ಲೆ, ಇಬ್ಬರೂ ನಾಯಕರು ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಡೋಕ್ಲಾಮ್ ಬಿಕ್ಕಟ್ಟಿನ ಕುರಿತು ಹೇಳುವುದಾದರೆ ರಾಜತಾಂತ್ರಿಕ ವಿಧಾನವನ್ನೇ ಮುಂದುವರಿಸಲಾಗುವುದು. ಎರಡೂ ದೇಶಗಳ ದೂತಾವಾಸ ಕಚೇರಿಗಳ ಮೂಲಕ ಈ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಿದ್ದಾರೆ.

epaper.kannadaprabha.in