Asianet Suvarna News Asianet Suvarna News

ಗುಜರಾತ್ ನಲ್ಲಿ ನಿಶಾಚರಿಗಳ ಝೂ: ವಾರ್ಷಿಕ ಆದಾಯ 3 ಕೋಟಿ!

ಗುಜರಾತಿನಲ್ಲಿ ದೇಶದ ಮೊದಲ ನಿಶಾಚರಿ ಪ್ರಾಣಿ ಸಂಗ್ರಹಾಲಯ| ಝೂ ವೀಕ್ಷಣೆಗೆ ಪ್ರವಾಸಿಗರ ದಂಡು| ವರ್ಷಕ್ಕೆ 3 ಕೋಟಿ ರು. ಆದಾಯ ಸಂಗ್ರಹ

India s first nocturnal zoo earns Rs 3 crore annually
Author
Bangalore, First Published Apr 14, 2019, 7:57 AM IST

ಅಹಮದಾಬಾದ್‌[ಏ.14]: ರಾತ್ರಿಯ ವೇಳೆಯಲ್ಲಿ ಸಕ್ರಿಯವಾಗಿರುವ ನಿಶಾಚರಿ ಪ್ರಾಣಿಗಳಿಗೆಂದೇ ಗುಜರಾತಿನ ಕನ್ಕಾರಿಯಾದಲ್ಲಿ ಪ್ರಾಣಿ ಸಂಗ್ರಹಾಲಯವೊಂದನ್ನು ನಿರ್ಮಿಸಲಾಗಿದೆ. ಭಾರತದಲ್ಲೇ ಮೊದಲು ಎನಿಸಿರುವ ಈ ಪ್ರಾಣಿ ಸಂಗ್ರಹಾಲಯ ದೇಶ ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ವರ್ಷಕ್ಕೆ 3 ಕೋಟಿ ರು. ಆದಾಯ ಗಳಿಸುತ್ತಿದೆ.

ಮುಳ್ಳು ಹಂದಿ, ಕಾಡು ಬೆಕ್ಕು, ಗೂಬೆ, ಕತ್ತೆಕಿರುಬ ಮತ್ತಿತರ ನಿಶಾಚರ ಪ್ರಾಣಿಗಳಿಗಾಗಿ ಸುಮಾರು 17 ಕೋಟಿ ರು. ವೆಚ್ಚದಲ್ಲಿ 2017ರಲ್ಲಿ ಈ ಪ್ರಾಣಿ ಸಂಗ್ರಹಾಲಯ ನಿರ್ಮಿಸಲಾಗಿದೆ. ಈ ಪ್ರಾಣಿ ಸಂಗ್ರಹಾಲಯದಲ್ಲಿ ಹಗಲಿನ ವೇಳೆಯಲ್ಲಿ ರಾತ್ರಿಯಂತೆ ಹಾಗೂ ರಾತ್ರಿಯ ವೇಳೆ ಹಗಲಿನ ರೀತಿ ವಾತಾವರಣವನ್ನು ಸೃಷ್ಟಿಸಲಾಗಿದೆ.

ನಿಶಾಚರ ಪ್ರಾಣಿಗಳ ಬಗ್ಗೆ ಮಾಹಿತಿ ನೀಡಲು 7 ನಿಮಿಷಗಳ ಸಾಕ್ಷ್ಯ ಚಿತ್ರವೊಂದನ್ನು ಪ್ರವಾಸಿಗರಿಗೆ ತೋರಿಸಲಾಗುತ್ತದೆ. ರಾತ್ರಿಯ ವೇಳೆ ಇರುವ ತಾಪಮಾನ ಕಾಯ್ದುಕೊಳ್ಳಲು ಭೂಶಾಖದ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಅಲ್ಲದೇ ಈ ಝೂನಲ್ಲಿ ವಿಶೇಷ ಬೆಳಕಿನ ವ್ಯವಸ್ಥೆ ಇದ್ದು ರಾತ್ರಿಯ ವಾತಾವಣದಂತೆ ಕಂಡು ಬರುತ್ತದೆ. ಅರಣ್ಯದ ರೀತಿಯಲ್ಲೇ ಪ್ರಾಣಿ ಸಂಗ್ರಹಾಲಯವನ್ನು ವಿನ್ಯಾಸಗೊಳಿಸಲಾಗಿದೆ ಎಂದು ಪ್ರಾಣಿ ಸಂಗ್ರಹಾಲಯದ ನಿರ್ದೇಶಕ ಆರ್‌.ಕೆ. ಸಾಹು ಹೇಳಿದ್ದಾರೆ.

Follow Us:
Download App:
  • android
  • ios