ಉಭಯ ರಾಷ್ಟ್ರಗಳ ದ್ವಿಪಕ್ಷಿಯ ಸಂಬಂಧ ಕುರಿತು ಚರ್ಚಿಸಿದರು. ರಕ್ಷಣಾ, ವ್ಯಾಪಾರ ವಹಿವಾಟು, ಬಾಹ್ಯಕಾಶ ಪರಿಶೋಧನೆ, ಸ್ಮಾರ್ಟ್ ಸಿಟಿ ಸೇರಿದಂತೆ 16 ಒಪ್ಪಂದಗಳಿಗೆ ಉಭಯ ನಾಯಕರು ಸಹಿ ಮಾಡಿದ್ದಾರೆ.
ಗೋವಾ(ಅ.15): ಗೋವಾದಲ್ಲಿ ಇಂದಿನಿಂದ ಬ್ರಿಕ್ಸ್ ಶೃಂಗಸಭೆ ಆರಂಭವಾಗಿದೆ.ಇನ್ನೂಶೃಂಗಸಭೆಗೂ ಮುನ್ನ ರಷ್ಯಾ ಅಧ್ಯಕ್ಷ ವ್ಲಾದಿಮರ್ ಪುಟಿನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದಾರೆ.
ಉಭಯ ರಾಷ್ಟ್ರಗಳ ದ್ವಿಪಕ್ಷಿಯ ಸಂಬಂಧ ಕುರಿತು ಚರ್ಚಿಸಿದರು. ರಕ್ಷಣಾ, ವ್ಯಾಪಾರ ವಹಿವಾಟು, ಬಾಹ್ಯಕಾಶ ಪರಿಶೋಧನೆ, ಸ್ಮಾರ್ಟ್ ಸಿಟಿ ಸೇರಿದಂತೆ 16 ಒಪ್ಪಂದಗಳಿಗೆ ಉಭಯ ನಾಯಕರು ಸಹಿ ಮಾಡಿದ್ದಾರೆ.
ಬಳಿಕ ಜಂಟಿಗೋಷ್ಠಿ ಉದ್ದೇಶಿಸಿ ಉಭಯ ನಾಯಕರು ಮಾತನಾಡಿದ್ದಾರೆ. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಭಾರತಕ್ಕೆ ರಷ್ಯಾ ಕೊಡುಗೆಯನ್ನು ಶ್ಲಾಘಿಸಿದರು.