ಪಾಕಿಸ್ತಾನದ 18 ಮೀನುಗಾರರು ಸೇರಿದಂತೆ ಒಟ್ಟು 39 ನಾಗರೀಕ ಕೈದಿಗಳನ್ನು ಇಂದು ಭಾರತ ಬಿಡುಗಡೆ ಮಾಡಿದೆ.
ನವದೆಹಲಿ (ಮಾ.01): ಪಾಕಿಸ್ತಾನದ 18 ಮೀನುಗಾರರು ಸೇರಿದಂತೆ ಒಟ್ಟು 39 ನಾಗರೀಕ ಕೈದಿಗಳನ್ನು ಇಂದು ಭಾರತ ಬಿಡುಗಡೆ ಮಾಡಿದೆ.
ಬಿಡುಗಡೆಗೊಳಿಸಿದ ಕೈದಿಗಳನ್ನು ಅತ್ತಾರಿ/ವಾಘಾ ಚೆಕ್ ಪೋಸ್ಟ್ ಮೂಲಕ ವಾಪಾಸ್ ಪಾಕ್ ಗೆ ಕಳುಹಿಸಲಾಗುತ್ತದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. 217 ಭಾರತೀಯ ಮೀನುಗಾರರನ್ನು ಸನ್ನಡತೆ ಆಧಾರದ ಮೇಲೆ ಪಾಕಿಸ್ತಾನ ಡಿಸಂಬರ್ ನಲ್ಲಿ ಬಿಡುಗಡೆಗೊಳಿಸಿದ್ದರಿಂದ ಇಂದು ಭಾರತ ಕೂಡಾ ಪಾಕ್ ಕೈದಿಗಳನ್ನು ಬಿಡುಗಡೆಗೊಳಿಸಿದೆ.
ಶಿಕ್ಷೆ ಪೂರ್ಣಗೊಂಡಿದ್ದು, ಪ್ರಕರಣ ಬಾಕಿಯಿಲ್ಲದಿರುವುದು ಹಾಗೂ ರಾಷ್ಟ್ರೀಯತೆ ಸಾಬೀತುಪಡಿಸಿದ ಶರತ್ತಿನ ಮೇರೆಗೆ ಬಿಡುಗಡೆಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
