ಸಿಐಐ ವಾರ್ಷಿಕ ಅಧಿವೇಶನವನ್ನುದ್ದೇಶಿಸಿ ಮಾತನಾಡುತ್ತಿದ್ದ ಪಿಯೂಶ್ ಗೋಯಲ್, ಮೂರು ವರ್ಷ ಕಾಲ ಭಾರತದಲ್ಲಿನ ವಿದ್ಯುತ್ ವಾಹನ ಉದ್ಯಮವು ಸ್ವಾವಲಂಬನೆಯ ಮಟ್ಟಕ್ಕೆ ಬರುವವರೆಗೆ ಸರಕಾರವೇ ಸಕಲ ನೆರವಿನೊಂದಿಗೆ ಚೇತರಿಕೆ ನೀಡಲಿದೆ ಎಂದಿದ್ದಾರೆ.
ನವದೆಹಲಿ(ಏ. 30): ವೆಚ್ಚ ಕಡಿತಗೊಳಿಸಲು ಮತ್ತು ಪೆಟ್ರೋಲ್ ಅವಲಂಬನೆ ಕಡಿಮೆ ಮಾಡಲು ಕೇಂದ್ರ ಸರಕಾರ ಹೊಸ ಮಾಸ್ಟರ್'ಪ್ಲಾನ್ ರೂಪಿಸುತ್ತಿದೆ. ಅದರಂತೆ, 2030ರಷ್ಟರಲ್ಲಿ ಭಾರತದಲ್ಲಿ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗೆ ತರುವ ಯೋಜನೆ ನಡೆದಿದೆ. ಕೇಂದ್ರ ವಿದ್ಯುತ್ ಸಚಿವ ಪಿಯೂಶ್ ಗೋಯಲ್ ಅವರ ಪ್ರಕಾರ, 2030ರಿಂದ ಯಾವುದೇ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮಾರಾಟವಿರುವುದಿಲ್ಲ. ಬರೀ ಪೆಟ್ರೋಲ್ ವಾಹನಗಳಷ್ಟೇ ಭಾರತದಲ್ಲಿ ಲಭ್ಯವಿರಲಿದೆ.
ಸಿಐಐ ವಾರ್ಷಿಕ ಅಧಿವೇಶನವನ್ನುದ್ದೇಶಿಸಿ ಮಾತನಾಡುತ್ತಿದ್ದ ಪಿಯೂಶ್ ಗೋಯಲ್, ಮೂರು ವರ್ಷ ಕಾಲ ಭಾರತದಲ್ಲಿನ ವಿದ್ಯುತ್ ವಾಹನ ಉದ್ಯಮವು ಸ್ವಾವಲಂಬನೆಯ ಮಟ್ಟಕ್ಕೆ ಬರುವವರೆಗೆ ಸರಕಾರವೇ ಸಕಲ ನೆರವಿನೊಂದಿಗೆ ಚೇತರಿಕೆ ನೀಡಲಿದೆ ಎಂದಿದ್ದಾರೆ. ಎಲೆಕ್ಟ್ರಿಕ್ ವಾಹನಗಳು ಕಡಿಮೆ ಬೆಲೆಗೆ ಸಿಗತೊಡಗಿದಾಗ ಜನರು ಈ ವಾಹನಗಳ ಖರೀದಿಗೆ ಮುಂದಾಗುತ್ತಾರೆ. ಈ ನಿಟ್ಟಿನಲ್ಲಿ ಈ ಕ್ಷೇತ್ರದಲ್ಲಿ ಆರ್ ಅಂಡ್ ಡಿ ಕಾರ್ಯಕ್ಕೆ ಹೆಚ್ಚಿನ ಬಂಡವಾಳ ಹೂಡುವ ಅವಶ್ಯಕತೆ ಇದೆ ಎಂದೂ ಪೀಯುಶ್ ಗೋಯಲ್ ಅಭಿಪ್ರಾಯಪಟ್ಟಿದ್ದಾರೆ.
ಭಾರತದಲ್ಲಿ ಸದ್ಯ ಅತ್ಯಲ್ಪ ಮಟ್ಟದಲ್ಲಿ ಮಾತ್ರ ಎಲೆಕ್ಟ್ರಿಕ್ ವಾಹನಗಳ ಮಾರಾಟವಿದೆ. ಮಹೀಂದ್ರ ಸಂಸ್ಥೆಯ ಇ-ವೆರಿಟೋ ಕಾರುಗಳು ಒಮ್ಮೆ ರೀಚಾರ್ಜ್ ಆದರೆ 110 ಕಿಮೀ ಓಡಬಲ್ಲವು. ಆದರೆ, ಇದರ ಬೆಲೆ ಕನಿಷ್ಠ 7.5 ಲಕ್ಷ ರೂಪಾಯಿ ಇದೆ. ಮುಂದಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಹೆಚ್ಚು ಸಂಶೋಧನೆಗಳಾದರೆ ಕಡಿಮೆ ಬೆಲೆಗಳಿಗೆ ಎಲೆಕ್ಟ್ರಿಕ್ ವಾಹನಗಳು ಲಭ್ಯವಾಗುವ ನಿರೀಕ್ಷೆ ಇದೆ.
