ಇಸ್ಲಮಾಬಾದ್[ಜೂ.18]: ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಭಾರೀ ಕುತೂಹಲ ಮೂಡಿಸಿತ್ತು. ಟೀಂ ಇಂಡಿಯಾ ಪಡೆ, ಪಾಕಿಸ್ತಾನವನ್ನು ಸೋಲಿಸಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲೂ ಜನರು ಮೀಮ್ಸ್, ವಿಡಿಯೋಗಳ ಮೂಲಕ ಖುಷಿ ವ್ಯಕ್ತಪಡಿಸಿದ್ದರು. ಆದರೆ ಇವೆಲ್ಲದರ ನಡುವೆ ಪಾಕಿಸ್ತಾನದ ಓರ್ವ ಅಜ್ಜಿಯ ವಿಡಿಯೋ ಭಾರೀ ವೈರಲ್ ಆಗಿದೆ. ಭಾರತ ಚೆಂದವೋ? ಪಾಕಿಸ್ತಾನವೋ? ಎಂದು ಕೇಳಿದಾಗ ಅಜ್ಜಿ ಕೊಟ್ಟ ಉತ್ತರ ಎಲ್ಲರ ಮನಗೆದ್ದಿದೆ.

ಹೌದು ಯುವತಿಯೊಬ್ಬಳು ಅಜ್ಜಿ ಬಳಿಯ ಬಳಿ ಪಾಕಿಸ್ತಾನ ಚೆನ್ನಾಗಿದೆಯಾ ಅಥವಾ ಇಂಡಿಯಾ? ಎಂದು ಪ್ರಶ್ನಿಸುತ್ತಾಳೆ. ಇದಕ್ಕೆ ಉತ್ತರವಾಗಿ ಆ ಅಜ್ಜಿ ಪಾಕಿಸ್ತಾನ ಎನ್ನುತ್ತಾರೆ. ಕೂಡಲೇ ಆ ಯುವತಿ ಅಜ್ಜೀ... ಹಾಗೆ ಹೇಳಬಾರದು, ನೀವು ಪಾಕಿಸ್ತಾನದಲ್ಲಿದ್ದೀರಿ, ಇದು ನಮ್ಮ ದೇಶ ಎನ್ನುತ್ತಾಳೆ. ಅಷ್ಟರಲ್ಲೇ ಮತ್ತೆ ಆಕೆಗೆ ಪ್ರತಿಕ್ರಿಯಿಸಿದ ಪಾಕಿಸ್ತಾನದ ಅಜ್ಜಿ ನಾನು ಈಗ ಪಾಕಿಸ್ತಾನದಲ್ಲಿರಬಹುದು ಆದರೆ ಮೊದಲು ಇದು ಇಂಡಿಯಾ ಆಗಿತ್ತಲ್ಲವೇ? ಎಂದು ಪ್ರಶ್ನಿಸುತ್ತಾರೆ.

ಪಾಕಿಸ್ತಾನದ ಪತ್ರಕರ್ತೆ ನಾಯ್ಲಾ ಇನಾಯತ್ ಎಂಬಾಕೆ ಈ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಪಾಕಿಸ್ತಾನದ ಅಜ್ಜಿ ಭಾರತೀಯರ ಹೃದಯ ಕದ್ದಿದ್ದಾರೆ. ಹಲವಾರು ಮಂದಿ ಭಾರತ ವಿಭಜನೆ ವೆಳೆ ಬಹುತೇಕರು ಖುಷಿಪಟ್ಟಿರಲಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಆದರೆ ಈ ವಿಡಿಯೋ ಹಿಂದಿನ ವಾಸ್ತವವೇನು? ಎಂಬುವುದು ಮಾತ್ರ ಇನ್ನೂ ತಿಳಿದು ಬಂದಿಲ್ಲ.