ರಫೇಲ್ ಕಡಿಮೆ ತೂಕ ಹೊಂದಿದ್ದು, ಬಹುಪಾತ್ರ ವಿಮಾನವಾಗಿದೆ. ಹಾಗಾಗಿ, ಇದನ್ನು ಯಾವುದೇ ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ಬಳಸಬಹುದು.

ನವದೆಹಲಿ(ಡಿ.28): ಭಾರತಕ್ಕೆ ಹೆಚ್ಚಿನ ಸಂಖ್ಯೆಯ ರಫೇಲ್ ಯುದ್ಧ ವಿಮಾನಗಳ ಅಗತ್ಯವಿದೆ ಎಂದು ಇದೇ ತಿಂಗಳಾಂತ್ಯದಲ್ಲಿ ನಿವೃತ್ತಿಯಾಗಲಿರುವ ವಾಯುಪಡೆಯ ಮುಖ್ಯಸ್ಥ ಅರೂಪ್ ರಾಹಾ ಪ್ರತಿಪಾದಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಏರ್ ಚೀಫ್ ಮಾರ್ಷಲ್ ಅರೂಪ್ ರಾಹಾ, ‘‘36 ರಫೇಲ್ ಯುದ್ಧ ವಿಮಾನಗಳು ಸಾಕಾಗುವುದಿಲ್ಲ. ಎದುರಾಳಿಗಳನ್ನು ಎದುರಿಸಲು ಭಾರತಕ್ಕೆ 200-250 ಫೈಟರ್ ಜೆಟ್‌ಗಳ ಅಗತ್ಯವಿದೆ,’’ ಎಂದಿದ್ದಾರೆ.

ರಫೇಲ್ ಕಡಿಮೆ ತೂಕ ಹೊಂದಿದ್ದು, ಬಹುಪಾತ್ರ ವಿಮಾನವಾಗಿದೆ. ಹಾಗಾಗಿ, ಇದನ್ನು ಯಾವುದೇ ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ಬಳಸಬಹುದು. ಈ ಹಿನ್ನೆಲೆಯಲ್ಲಿ ಹೆಚ್ಚಿನ ವಿಮಾನಗಳ ಅಗತ್ಯವಿದ್ದು, ಪ್ರಸ್ತುತ ಕೇವಲ 36 ವಿಮಾನಗಳಿಗಾಗಿ ನಾವು ಒಪ್ಪಂದ ಮಾಡಿಕೊಂಡಿದ್ದೇವೆ ಎಂದಿದ್ದಾರೆ.