ರಕ್ತಪಾತ ನಿಲ್ಲುವವರೆಗೂ ಪಾಕ್ ಜೊತೆ ಮಾತುಕತೆ ಬೇಡವೇ ಬೇಡ

India must hold talks with Pakistan to end bloodshed in JK
Highlights

ಸುಪ್ರೀಂ ಕೋರ್ಟ್ ಕೂಡ ಇಂದು ಮೇಜರ್ ಆದಿತ್ಯ ಕುಮಾರ್ ವಿರುದ್ಧದ ನಾಗರಿಕರನ್ನು ಕೊಂದ ಪ್ರಕರಣದಲ್ಲಿ ತಡೆಯಾಜ್ಞೆ ನೀಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ. 

ಶ್ರೀನಗರ(ಫೆ.12): ಕಣಿವೆ ರಾಜ್ಯದಲ್ಲಿ ರಕ್ತಪಾತ ನಿಲ್ಲಬೇಕಾದರೆ ಕೇಂದ್ರ ಸರ್ಕಾರ ಮಾತುಕತೆಗೆ ಮುಂದಾಗಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ಅವರು, ಕಣಿವೆ ರಾಜ್ಯದಲ್ಲಿ ರಕ್ತಪಾತ ನಿಲ್ಲಬೇಕಾದರೆ ಕೇಂದ್ರ ಸರ್ಕಾರ ಮಾತುಕತೆಗೆ ಮುಂದಾಗಬೇಕು. ನನ್ನನ್ನು ಕೆಲ ಮಾಧ್ಯಮ ಮಿತ್ರರು ದೇಶ ವಿರೋಧಿ ಎಂದು ಹಣೆಪಟ್ಟಿ ಕಟ್ಟಿದ್ದಾರೆ. ಆದರೆ ನಾನು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ಜಮ್ಮು ಕಾಶ್ಮೀರದ ಜನತೆ ತೊಂದರೆ ಅನುಭವಿಸುತ್ತಿದ್ದಾರೆ. ನಮಗೆ ಮಾತುಕತೆಯಲ್ಲದೆ ಯುದ್ಧದ ಆಯ್ಕೆ ಬೇಕಾಗಿಲ್ಲ'ಎಂದು ತಿಳಿಸಿದರು.

ಸುಪ್ರೀಂ ಕೋರ್ಟ್ ಕೂಡ ಇಂದು ಮೇಜರ್ ಆದಿತ್ಯ ಕುಮಾರ್ ವಿರುದ್ಧದ ನಾಗರಿಕರನ್ನು ಕೊಂದ ಪ್ರಕರಣದಲ್ಲಿ ತಡೆಯಾಜ್ಞೆ ನೀಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ.  ಮೇಜರ್ ಆದಿತ್ಯ ವಿರುದ್ಧ ಕಾಶ್ಮಿರದ ಶೋಪಿಯನ್ ಜಿಲ್ಲೆಯಲ್ಲಿ ನಾಗರಿಕರ ಕೊಂದ ಆರೋಪದಲ್ಲಿ ಸ್ಥಳೀಯ ಪೊಲೀಸರು ಎಫ್'ಐಆರ್ ದಾಖಲಿಸಿದ್ದರು. ಮೇಜರ್ ತಂದೆ ಶಿಕ್ಷೆ ನೀಡದಂತೆ ಸುಪ್ರೀಂ ಕೋರ್ಟ್ ಮೋರೆ ಹೋಗಿದ್ದರು.

loader