1869-1948ರವರೆಗೆ ಗಾಂಧಿ ನಡೆದು ಬಂದ ದಾರಿ
ಅಕ್ಟೋಬರ್ 2, 1869ರಂದು ಜನಿಸಿದ ಗಾಂಧೀಜಿ 1948, ಜನವರಿ 30ರಂದು ದೇಹ ತ್ಯಾಗ ಮಾಡಿದರು. ಹುಟ್ಟಿನಿಂದ ಸಾವಿನವರೆಗೂ ನಡೆದು ಬಂದ ದಾರಿ ಇದು.
ಗಾಂಧೀಜಿ 1869-1948
- ಅಕ್ಟೋಬರ್ 2, 1869 ಗುಜರಾತ್‌ನ ಪೋರಬಂದರ್‌ನಲ್ಲಿ ಜನನ. ತಂದೆ ಕರಮಚಂದ ಗಾಂಧಿ, ತಾಯಿ ಪುತಲೀ ಬಾಯಿ
- ಬಾಲ್ಯದಲ್ಲಿ ಶ್ರವಣ ಹಾಗೂ ಸತ್ಯ ಹರಿಶ್ಚಂದ್ರ ಕಥೆಗಳಿಂದ ಪ್ರೇರಣೆ.
- 13ನೇ ವಯಸ್ಸಿನಲ್ಲಿ ೧೪ನೇ ವಯಸ್ಸಿನ ಕಸ್ತೂರಬಾ ಅವರೊಂದಿಗೆ ವಿವಾಹ
- ಕಾನೂನಿನ ಶಿಕ್ಷಣಕ್ಕಾಗಿ ೧೮೮೮ರಲ್ಲಿ ಇಂಗ್ಲೆಂಡ್‌ಗೆ ಪಯಣ.
- 1891ರಲ್ಲಿ ಕಾನೂನು ಪದವಿ ಪಡೆದು ಭಾರತದಲ್ಲಿ ವಕೀಲ ವೃತ್ತಿ.
- 1893ರಲ್ಲಿ ದಕ್ಷಿಣ ಆಫ್ರಿಕಾಕ್ಕೆ ಪಯಣ. ಅಲ್ಲಿ ವಕೀಲ ವೃತ್ತಿ ಮುಂದುವರಿಕೆ.
- ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿಯ ವಿರುದ್ಧ ಪ್ರತಿಭಟನೆ - ಅಹಿಂಸಾತ್ಮಕ ನಾಗರಿಕ ಅವಿಧೇಯತೆ ಆಂದೋಲನ.
- 1906ರಲ್ಲಿ ವರ್ಣಭೇದ ನೀತಿ ವಿರೋಧಿಸಿ ಸತ್ಯಾಗ್ರಹ.
- 21 ವರ್ಷದ ಬಳಿಕ 1915ರಲ್ಲಿ ಭಾರತಕ್ಕೆ ವಾಪಸ್.
- 1921 ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ನಾಯಕತ್ವ.
- 1922ರಲ್ಲಿ ಅಸಹಕಾರ ಚಳುವಳಿ ಆರಂಭ. ಜಲಿಯಾನ್ ವಾಲಾಭಾಗ್ ಹತ್ಯಾಕಾಂಡದ ವಿರುದ್ಧ ಅಹಿಂಸಾತ್ಮಕ ಹೋರಾಟ. ಗಾಂಧೀಜಿ ಅವರಿಗೆ 6 ವರ್ಷ ಜೈಲು ಶಿಕ್ಷೆ ಘೋಷಿಸಿದ ಬ್ರಿಟೀಷ್ ಸರ್ಕಾರ.
- 1931- ಗಾಂಧಿ ಇರ್ವಿನ್ ಒಪ್ಪಂದ.
- 1930ರಲ್ಲಿ ಉಪ್ಪಿನ ಸತ್ಯಾಗ್ರಹ. ದೇಶಾದ್ಯಂತ ಸ್ವಾತಂತ್ರ್ಯ ಹೋರಾಟದ ಕಿಚ್ಚು ಪಸರಿಸಿದ ಮಹಾತ್ಮ.
- ಕ್ವಿಟ್ ಇಂಡಿಯಾ ಚಳುವಳಿ- ಮಾಡು ಇಲ್ಲವೇ ಮಡಿ ಹೋರಾಟ.
- 1947 ಆಗಸ್ಟ್ 15 ಭಾರತಕ್ಕೆ ಸ್ವಾತಂತ್ರ್ಯ.
- ಭಾರತ-ಪಾಕಿಸ್ತಾನ ಇಬ್ಭಾಗ.
- 1948 ಜನವರಿ 30ರಂದು ಇಹಲೋಕ ತ್ಯಜಿಸಿದ ಗಾಂಧಿ
ಗಾಂಧಿ ನುಡಿಮುತ್ತುಗಳು
- ಜಗತ್ತಿನ ಎಲ್ಲಾ ಶ್ರೇಷ್ಠ ಧರ್ಮಗಳು ಮಾನವತೆಯ ಸಮಾನತೆ, ಭ್ರಾತೃತ್ವ ಹಾಗೂ ಸಹನೆಯ ಸದ್ಗುಣಗಳನ್ನು ಸಾರಿ ಸಾರಿ ಹೇಳುತ್ತವೆ.
- ಕಾರ್ಮಿಕರು ಒಬ್ಬರ ಮೇಲೊಬ್ಬರು ಅಪನಂಬಿಕೆ ಇಟ್ಟುಕೊಂಡರೆ ಜಂಟಿಯಾಗಿ ಕಾರ್ಯ ನಿರ್ವಹಿಸುವುದು ಅಸಾಧ್ಯ.
- ಸತ್ಯ ಎನ್ನುವುದು ದೊಡ್ಡ ಮರವಿದ್ದಂತೆ. ನೀನು ಅದನ್ನು ಎಷ್ಟು ಜತನ ಮಾಡುತ್ತೀಯೋ ಅಷ್ಟು ಹೆಚ್ಚಿನ ಹಣ್ಣುಗಳನ್ನು ಅದು ಕೊಡುತ್ತದೆ.
- ನಿನ್ನನ್ನು ನೀನು ಕಾಣಲು ಇರುವ ಅತ್ಯುತ್ತಮ ಮಾರ್ಗವೆಂದರೆ ನೀನು ಇತರರ ಸೇವೆಯಲ್ಲಿಯೇ ಕಳೆದು ಹೋಗುವುದು.