Asianet Suvarna News Asianet Suvarna News

ಮಹಾತ್ಮ ಗಾಂಧಿ 150: ಬಾಪೂ ಬದುಕಿನ ಹಾದಿ

ಮಹಾತ್ಮ ಗಾಂಧಿಜೀ ಜನಿಸಿದ್ದು  ಅಕ್ಟೋಬರ್ 2, 1869ರಂದು. 1948 ಜನವರಿ 30ರಂದು ಅವರ ಹತ್ಯೆಯಾಯಿತು. ಬಾಪೂವಿನ ಜೀವನದಲ್ಲಿ ಪ್ರತಿ ದಿನ, ಪ್ರತಿ ವರ್ಷ ಬಹಳ ಮಹತ್ವಕಾರಿಯಾಗಿತ್ತು. ರಾಷ್ಟ್ರಪಿತನ ಬದುಕಿನ ಹಾದಿಯ ಒಂದು ನೋಟ ಇಲ್ಲಿದೆ. 

India MK Gandhi 150  Life of Mahatma Gandhi At Glance
Author
Bengaluru, First Published Oct 2, 2018, 1:47 PM IST

India MK Gandhi 150  Life of Mahatma Gandhi At Glance

 

1869 ಅ.2: ಗುಜರಾತಿನ ಪೋರ್‌ಬಂದರ್‌ನ ಕಾತಿಯಾವಾಡ್‌ನಲ್ಲಿ ಜನನ. ತಂದೆ ತಂದೆ ಕರಮಚಂದ ಗಾಂಧಿ ಮತ್ತು ತಾಯಿ ಪುತಲೀಬಾಯಿ

1876: ರಾಜಕೋಟ್‌ನಲ್ಲಿ ಪ್ರಾಥಮಿಕ ಶಿಕ್ಷಣ

1883: ಪೋರ್‌ಬಂದರ್‌ನಲ್ಲಿ ಕಸ್ತೂರ್‌ಬಾ ಜೊತೆ ವಿವಾಹ

1888 ಸೆ.4: ಕಾನೂನು ಅಧ್ಯಯನಕ್ಕಾಗಿ ಲಂಡನ್‌ಗೆ

1891 ಜ.12: ಕಾನೂನು ಪರೀಕ್ಷೆಯಲ್ಲಿ ಉತ್ತೀರ್ಣ

1891 ಜೂ: ಬ್ಯಾರಿಸ್ಟರ್‌ ಪದವಿ ಪಡೆದು ಹೈಕೋರ್ಟ್‌ನಲ್ಲಿ ತರಬೇತಿ ಮುಗಿಸಿ ಭಾರತಕ್ಕೆ ವಾಪಸ್‌

1892 ಮೇ 24: ಬಾಂಬೆ ಹೈಕೋರ್ಟ್‌ನಲ್ಲಿ ವಕೀಲರಾಗಿ ವೃತ್ತಿ ಆರಂಭ

1893: ಪೋರ್‌ಬಂದರ್‌ ಕಂಪನಿಯೊಂದರ ಪರ ವಾದಿಸಲು ದಕ್ಷಿಣ ಆಫ್ರಿಕಾಕ್ಕೆ

1893 ಜೂನ್‌: ಪೀಟರ್‌ರ್ಮಾರಿಟ್‌್ಜಬರ್ಗ್‌ ರೈಲ್ವೆ ನಿಲ್ದಾಣದಲ್ಲಿ ವರ್ಣ ತಾರತಮ್ಯ. ಮೊದಲ ದರ್ಜೆಯ ಟಿಕೆಟ್‌ ಇದ್ದರೂ ಸಾಮಾನ್ಯ ದರ್ಜೆಯಲ್ಲಿ ಹೋಗುವಂತೆ ಗಾಂಧೀಜಿಯನ್ನು ರೈಲಿನಿಂದ ಇಳಿಸಿದ ರೈಲ್ವೆ ಸಿಬ್ಬಂದಿ

1894: ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರು ಮತ್ತು ಕರಿಯ ವರ್ಣದವರ ಮೇಲೆ ನಡೆಯುತ್ತಿರುವ ವರ್ಣ ತಾರತಮ್ಯದ ವಿರುದ್ಧ ಹೋರಾಡಲು ಸಂಘಟನೆಯೊಂದರ ಸ್ಥಾಪನೆ ಪ್ರಸ್ತಾಪ

1894 ಆ.22: ವರ್ಣ ತಾರತಮ್ಯದ ವಿರುದ್ಧ ಹೋರಾಡಲು ನತಾಲ್‌ ಇಂಡಿಯನ್‌ ಕಾಂಗ್ರೆಸ್‌ ಸ್ಥಾಪನೆ

1894: ಕೋರ್ಟ್‌ ಕೇಸ್‌ ಮುಗಿದ ಬಳಿಕ ಭಾರತಕ್ಕೆ ಮರಳಲು ಸಿದ್ಧತೆ. ಆದರೆ, ಭಾರತೀಯ ಸಮುದಾಯದ ಒತ್ತಡದಿಂದ ಕೆಲ ಕಾಲ ದಕ್ಷಿಣ ಆಫ್ರಿಕಾದಲ್ಲೇ ಇದ್ದು, ಹೋರಾಟ ನಡೆಸಲು ನಿರ್ಧಾರ

1896: ಆರು ತಿಂಗಳ ಮಟ್ಟಿಗೆ ಭಾರತಕ್ಕೆ ಮರಳಿ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ದಕ್ಷಿಣ ಆಫ್ರಿಕಾಕ್ಕೆ ಕರೆದೊಯ್ದ ಗಾಂಧೀಜಿ

1899: ಬೋಯರ್‌ ಯದ್ಧದಲ್ಲಿ ಬ್ರಿಟೀಷರ ಪರ ಇಂಡಿಯನ್‌ ಆಂಬುಲೆನ್ಸ್‌ ಕಾಫ್ಸ್‌ರ್‍ ಸ್ಥಾಪನೆ

1901: ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್‌ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಮರಳಿದ ಗಾಂಧೀಜಿ, ಭಾರತದಲ್ಲೇ ವಕೀಲ ವೃತ್ತಿ

1902: ಭಾರತೀಯ ಸಮುದಾಯದ ಒತ್ತಾಯದ ಮೇರೆಗೆ ಮತ್ತೊಮ್ಮೆ ದಕ್ಷಿಣ ಆಫ್ರಿಕಾಕ್ಕೆ ತೆರಳಿದ ಗಾಂಧೀಜಿ

1903: ಜೋಹಾನ್ಸ್‌ಬರ್ಗ್‌ನಲ್ಲಿ ಕಾನೂನು ಕಚೇರಿ ಆರಂಭ

1904: ಇಂಡಿಯನ್‌ ಒಪಿನಿಯನ್‌ ಸಾಪ್ತಾಹಿಕ ಪತ್ರಿಕೆ ಆರಂಭ

1906: ದಕ್ಷಿಣ ಆಫ್ರಿಕಾದಲ್ಲಿ ಭಾರತ ವಿರೋಧಿ ಕಾನೂನಿನ ವಿರುದ್ಧ ಮೊದಲ ಬಾರಿಗೆ ಪ್ರತಿಭಟನೆ ಆಯೋಜಿಸಿದ ಗಾಂಧೀಜಿ

1906: ದಕ್ಷಿಣ ಆಫ್ರಿಕಾದಲ್ಲಿ ಸೆರೆವಾಸ

1915 ಜ.9: ಭಾರತಕ್ಕೆ ಮರಳಿದ ಗಾಂಧೀಜಿ

1915 ಮೇ 25: ಗಾಂಧೀಜಿ ಮತ್ತು ಅವರ ಅನುಯಾಯಿಗಳಿಂದ ಅಹಮದಾಬಾದ್‌ನಲ್ಲಿ ಸತ್ಯಾಗ್ರಹ ಆಶ್ರಮ ಸ್ಥಾಪನೆ

1917 ಏಪ್ರಿಲ್‌: ಬ್ರಿಟಿಷರ ವಿರುದ್ಧ ಸತ್ಯಾಗ್ರಹ ಚಳವಳಿ ಅರಂಭ

1919 ಏ.6: ರೌಲತ್‌ ಕಾಯ್ದೆ ವಿರೋಧಿಸಿ ದೇಶವ್ಯಾಪಿ ಹರತಾಳ, ಒಂದು ದಿನದ ಉಪವಾಸಕ್ಕೆ ಯಂಗ್‌ ಇಂಡಿಯಾ ಪತ್ರಿಕೆಯ ಮೂಲಕ ಕರೆ

1919 ಆ.1: ದೇಶದೆಲ್ಲೆಡೆ ಬ್ರಿಟಿಷರ ವಿರುದ್ಧ ಅಸಹಕಾರ ಚಳವಳಿಗೆ ಗಾಂಧೀಜಿ ಕರೆ

1922 ಮಾ.10: ದೇಶದ್ರೋಹ ಆರೋಪದ ಮೇಲೆ ಗಾಂಧೀಜಿ ಬಂಧನ, 6 ವರ್ಷ ಜೈಲು

1924 ಮಾಚ್‌ರ್‍: ಅವಧಿಗೆ ಮುನ್ನವೇ ಜೈಲುವಾಸದಿಂದ ಬಿಡುಗಡೆ

1924: ಡಿಸೆಂಬರ್‌ ಬೆಳಗಾವಿ ರಾಷ್ಟ್ರೀಯ ಕಾಂಗ್ರೆಸ್‌ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಭಾಷಣ

1930 ಜ. 26: ದೇಶದೆಲ್ಲೆಡೆ ಸ್ವಾತಂತ್ರ್ಯ ದಿನದ ಪ್ರತಿಜ್ಞೆ

1930 ಮಾ.12: ಉಪ್ಪಿನ ಮೇಲೆ ತೆರಿಗೆ ಹೇರಿದ್ದದನ್ನು ವಿರೋಧಿಸಿ ಗಾಂಧೀಜಿ ನೇತೃತ್ವದಲ್ಲಿ ದಂಡಿ ಯಾತ್ರೆ ಆರಂಭ

1930: ಉಪ್ಪಿನ ಸತ್ಯಾಗ್ರಹ ಕೈಗೊಂಡಿದ್ದಕ್ಕೆ ಬ್ರಿಟಿಷ್‌ ಆಡಳಿತದಿಂದ ಗಾಂಧೀಜಿ ಬಂಧನ

1932 ಜ.1: ಬ್ರಿಟಿಷ್‌ ಸರ್ಕಾರಕ್ಕೆ ನಾಗರಿಕ ಅಸಹಕಾರದ ಕುರಿತು ಕಾಂಗ್ರೆಸ್‌ನಿಂದ ಗೊತ್ತುವಳಿ ಅಂಗೀಕಾರ

1932: ಅಸ್ಪೃಶ್ಯತೆಯ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸಿದ ಗಾಂಧೀಜಿ

1932: ದೇಶದಲ್ಲಿ ಗ್ರಾಮೀಣ ಕೈಗಾರಿಕೆಗಳ ಒಕ್ಕೂಟ ಸ್ಥಾಪನೆ

1942 ಆ.8: ದೇಶವ್ಯಾಪಿ ಭಾರತ ಬಿಟ್ಟು ತೊಲಗಿ ಚಳವಳಿ ಆರಂಭ. ಕಾಂಗ್ರೆಸ್‌ ಮುಖಂಡರ ಸೆರೆ. ಆಗಾ ಖಾನ್‌ ಅರಮನೆಯಲ್ಲಿ ಗಾಂಧೀಜಿಗೆ ಸೆರೆವಾಸ

1943: ಜೈಲಿನಲ್ಲಿ ಇದ್ದುಕೊಂಡೇ ಬ್ರಿಟಿಷ್‌ ಆಳ್ವಿಕೆಯ ವಿರುದ್ಧ ಗಾಂಧೀಜಿ ಉಪವಾಸ ಸತ್ಯಾಗ್ರಹ

1944: ಫೆ.22: ಪತ್ನಿ ಕಸ್ತೂರ್‌ಬಾ ನಿಧನ

1944 ಮೇ 6: ಆಗಾ ಖಾನ್‌ ಪ್ಯಾಲೇಸ್‌ನಿಂದ ಗಾಂಧೀಜಿ ಬಿಡುಗಡೆ

1947 ಮಾಚ್‌: ಭಾರತ ಪಾಕಿಸ್ತಾನ ವಿಭಜನೆಗೊಳಿಸಿ ಸ್ವಾತಂತ್ರ್ಯ ಘೋಷಣೆಗೆ ಒಪ್ಪಿದ ಬ್ರಿಟಿಷ್‌ ಸರ್ಕಾರ

1947: ಅಧಿಕೃತವಾಗಿ ಭಾರತಕ್ಕೆ ಸ್ವಾತಂತ್ರ್ಯ ಘೋಷಣೆ

1948 ಜ.13; ಸ್ವಾತಂತ್ರ್ಯದ ಬಳಿಕ ದೇಶದಲ್ಲಿ ಉಂಟಾದ ಹಿಂದು- ಮುಸ್ಲಿಂ ಕೋಮು ಗಲಭೆ ನಿಲ್ಲಿಸುವಂತೆ ಆಮರಣ ಉಪವಾಸ ಸತ್ಯಾಗ್ರಹ

1948 ಜ.18: ಆಮರಣ ಉಪವಾಸ ಅಂತ್ಯ

1948 ಜ.30: ನಾಥೂರಾಮ್‌ ಗೋಡ್ಸೆಯಿಂದ ಗಾಂಧೀಜಿ ಗುಂಡಿಕ್ಕಿ ಹತ್ಯೆ

Follow Us:
Download App:
  • android
  • ios