ಪರಕೀಯರ ಆಡಳಿತದ ವಿರುದ್ಧ ಸ್ವಾತಂತ್ರ್ಯದ ಹೋರಾಟದ ಕಿಚ್ಚು ಹೊತ್ತಿಸಿದ, ಅಸ್ಪಸ್ಯತೆ, ಅಸಮಾನತೆ ವಿರುದ್ಧ ಜನ ಜಾಗೃತಿ ಮೂಡಿಸಿದ ಮಹಾನ್ ಚೇತನ ನಮ್ಮ ಪ್ರೀತಿಯ ಗಾಂಧಿ. ದೆಹಲಿಯಿಂದ ಕೇರಳದವರೆಗೂ ದೇಶದ ಉದ್ದಗಲಕ್ಕೂ ಸುತ್ತಿ ಜನರನ್ನು ಒಂದುಗೂಡಿಸಿದ ಬಾಪೂಜಿ ಹೋದಲ್ಲೆಲ್ಲ ತಮ್ಮ ಛಾಪು, ನೆನಪು ಬಿಟ್ಟು ಹೋಗಿದ್ದಾರೆ. ಅವರ ಸುದೀರ್ಘ ಈ ಹೋರಾಟದ ಪಯಣದ ಇತಿಹಾಸದಲ್ಲಿ ಕರುನಾಡಿಗೂ ಒಂದು ಸ್ಥಾನವಿದೆ. 18 ಬಾರಿ ರಾಜ್ಯಕ್ಕೆ ಬಂದು ಹೋಗಿದ್ದ ಗಾಂಧೀಜಿಯ ಭೇಟಿಯ ನೆನಪು ಕನ್ನಡಿಗರ ಜನಮಾನಸದಲ್ಲಿ ಈಗಲೂ ಅಚ್ಚಳಿಯದೆ ಉಳಿದಿದೆ. ಕರುನಾಡಿನ ವಿವಿಧ ಭಾಗಗಳಲ್ಲಿ ಮಹಾತ್ಮನ ಸಂಚಾರದ ಸಣ್ಣದೊಂದು ಸ್ಮರಣೆ ಇಲ್ಲಿ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred