Asianet Suvarna News Asianet Suvarna News

ಗಡಿಯಲ್ಲಿ ಯುದ್ಧದ ಸನ್ನಿವೇಶ: ಆದಷ್ಟು ಬೇಗ ಭಾರತದ ಸೇನಾ ಬತ್ತಳಿಕೆ ಸೇರಲಿದೆ `ಬ್ರಹ್ಮಾಸ್ತ್ರ'

ರಫೆಲ್ ಫೈಟರ್ ಏರ್`ಕ್ರಾಫ್ಟ್`ಗಳನ್ನ ಆದಷ್ಟು ಬೇಗ ಕಳುಹಿಸಿಕೊಡಲು ಭಾರತ, ಫ್ರಾನ್ಸ್ ಸರ್ಕಾರಕ್ಕೆ ಮನವಿ

India May Get Rafale Fighter Jets Sooner Than Expected

ನವದೆಹಲಿ(ಅ.02): ಇತ್ತೀಚೆಗೆ ಭಾರತ ಸರ್ಕಾರ ಫ್ರಾನ್ಸ್ ಜೊತೆ ರಫೆಲ್ ಫೈಟರ್ ಜೆಟ್ ಒಪ್ಪಂದಕ್ಕೆ ಸಹಿ ಹಾಕಿತ್ತು. ಈ ಏರ್`ಕ್ರಾಫ್ಟ್`ಗಳನ್ನ ಭಾರತಕ್ಕೆ ತಲುಪಿಸಲು ಫ್ರಾನ್ಸ್ 36 ತಿಂಗಳ ಸಮಯ ಪಡೆದಿತ್ತು. ಆದರೆ, ಇದೀಗ ಅವಧಿಗೂ ಮುನ್ನವೇ ರಫೆಲ್ ಏರ್`ಕ್ರಾಫ್ಟ್ ಭಾರತದ ಸೇನಾ ಬತ್ತಳಿಕೆ ಸೇರಲಿವೆ.

 

ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ರಫೆಲ್ ಫೈಟರ್ ಏರ್`ಕ್ರಾಫ್ಟ್`ಗಳನ್ನ ಆದಷ್ಟು ಬೇಗ ಕಳುಹಿಸಿಕೊಡಲು ಭಾರತ, ಫ್ರಾನ್ಸ್ ಸರ್ಕಾರಕ್ಕೆ ಮನವಿ ಮಾಡಿದೆ.

 

ಈ ಕುರಿತು ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್,  `ನಮ್ಮ ಒಪ್ಪಂದದ ಪ್ರಕಾರ, ರಫೆಲ್ ಫೈಟರ್ ಏರ್`ಕ್ರಾಫ್ಟ್ಸ್ ಭಾರತಕ್ಕೆ ಚಸೇರಲು 36 ತಿಂಗಳು ಬೇಕು, ಅದಕ್ಕೂ ಮುನ್ನವೇ ರಫೇಲ್ ಏರ್`ಕ್ರಾಫ್ಟ್`ಗಳು ನಮ್ಮ ಕೈಸೇರುವ ನಿರೀಕ್ಷೆ ಇದೆ. ಆದಷ್ಟು ಬೇಗ ಕಳುಹಿಸುವಂತೆ ಫ್ರಾನ್ಸ್ ಸರ್ಕಾರಕ್ಕೆ ಮನವಿ ಮಾಡಿರುವುದಾಗಿ' ಹೇಳಿದ್ದಾರೆ.


ಸೆಪ್ಟೆಂಬರ್ 23ರಂದು ಭಾರತ ಮತ್ತು ಫ್ರಾನ್ಸ್ ರಾಷ್ಟ್ರಗಳು 7.87 ಬಿಲಿಯನ್(59000 ಕೋಟಿ) ರಫೆಲ್ ಫೈಟರ್ ಏರ್`ಕ್ರಾಫ್ಟ್ ಒಪ್ಪಂದಕ್ಕೆ ಸಹಿ ಹಾಕಿದ್ದವು.