ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ಭಾರತ-ಜಪಾನ್ ನಾಗರಿಕ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿದರು.

ನವದೆಹಲಿ (ನ.11): ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ಭಾರತ-ಜಪಾನ್ ನಾಗರೀಕ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿದರು.

6 ವರ್ಷಗಳ ಮಾತುಕತೆ ಬಳಿಕ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಸಮಯಕ್ಕನುಸಾರ ಎರಡು ದೇಶಗಳ ಸಂಬಂಧ ವೃದ್ಧಿಯಾಗಿದೆ. ನಾಗರೀಕ ಶಕ್ತಿ ಉತ್ಪಾದನೆಗೆ ಅಗತ್ಯವಿರುವ ಇಂಧನ, ಉಪಕರಣಗಳು ಹಾಗೂ ತಂತ್ರಜ್ಞಾನವನ್ನು ಟೋಕಿಯೋ ದೆಹಲಿಗೆ ಒದಗಿಸಲಿದೆ. ಇದನ್ನು ಶಾಂತಿಯುವ ಉದ್ದೇಶಕ್ಕಾಗಿ ಬಳಸಬೇಕು ಎಂದು ಒಪ್ಪಂದವಾಗಿದೆ.

ಭಾರತವು ಪರಮಾಣು ಶಕ್ತಿಯಲ್ಲಿ ತ್ವರಿತ ಆರ್ಥಿಕ ಬೆಳವಣಿಗೆಯನ್ನು ಎದುರು ನೋಡುತ್ತಿದೆ ಎಂದು ಮೋದಿ ಹೇಳಿದ್ದಾರೆ.